ಮೂಡುಬಿದಿರೆ: ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.

ಸ್ಪರ್ಧೆಯ ಫಲಿತಾಂಶ:
ಟ್ರೆಡಿಶನಲ್: ಬಾಲಕರ ವಿಭಾಗದಲ್ಲಿ ಶಿವಕುಮಾರ್ ವಿ ಜಿ- ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಪೂರ್ವಿಕಾ ಜೆ ಎಂ ಮತ್ತು ಅನನ್ಯ ಎಸ್ ಜಿ – ಪ್ರಥಮ ಸ್ಥಾನ
ರಿದಮಿಕ್ ಪೇರ್: ಬಾಲಕರ ವಿಭಾಗದಲ್ಲಿ ಶ್ರೀವತ್ಸರಾಜ್ ಮತ್ತು ಪೃಥ್ವಿಚಾರ್ ಎನ್ – ಪ್ರಥಮ ಸ್ಥಾನ
ರಿದಮಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಪೂರ್ವಿಕಾ ಜೆ ಎಂ ಮತ್ತು ಅನನ್ಯ ಎಸ್ ಜಿ – ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಸಿಂಗಲ್: ಬಾಲಕರ ವಿಭಾಗದಲ್ಲಿ ಶಿವಕುಮಾರ್ ವಿ. ಜಿ – ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ
ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವರು ಅಭಿನಂದಿಸಿದ್ದಾರೆ.
