ಮೂಡುಬಿದಿರೆ: ಸೆಪ್ಟೆಂಬರ್ ನಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ಒಟ್ಟು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ರಾಷ್ಟ್ರೀಯ ಸರಾಸರಿ ಶೇಕಡಾ 18.93ರಷ್ಟಿದ್ದ ಈ ಪರೀಕ್ಷೆಯಲ್ಲಿ, ಆಳ್ವಾಸ್ ಸಂಸ್ಥೆ ಶೇಕಡಾ 31.75 ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಧಿತು ಪಡಿಸಿದೆ.
ಸೆಪ್ಟೆಂಬರ್ 2026ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಯಾದ ಸುವಿತ್ ಭಂಡಾರಿ, ವಿಕಾಸ್ ಶೆಟ್ಟಿ, ಸೂರಜ್ ಮಾಹಂತೇಶ್, ಸುಪ್ರೀತಾ, ಸುದೀಕ್ಷಾ , ತನುಷ್ ಜಿ ಶೆಟ್ಟಿ, ನಂದನ್ ಪಿ. ನಾಯಕ್, ವೆಂಕಟೇಶ್ ಪ್ರಭು, ತನ್ವಿ ವಿಜಯ್ ಕೋಟ್ಯಾನ್, ವೆನಿಸ್ಸಾ, ಶ್ರೇಯಾ ಎಸ್. ಶೆಟ್ಟಿ, ವೈಷ್ಣವಿ, ಪ್ರಥಮ್ ನಾಯಕ್, ಶ್ರಾವ್ಯ, ಶಾಶ್ವತ್, ಪ್ರಗತಿ, ಪ್ರೀತಮ್, ಆಯೇಷಾ ಆನಮ್, ಸಾಹಿತ್ಯಾ ಕುಶಲ್ ಹಾಗೂ ವರುಣ್ ಕುಮಾರ್ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ವಾಣಿಜ್ಯ ವಿಭಾಗದ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇದೀಗ ಮೇ ತಿಂಗಳ ಪ್ರಯತ್ನದಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಒಟ್ಟು ಮೇ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 61 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಅಭಿನಂದಿಸಿದ್ದಾರೆ.
