ಮಂಗಳೂರು: ಮಂಗಳೂರು ನಗರ ಪೊಲೀಸ್ ಘಟಕ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಕುಟುಂಬದವರಿಗೆ ದೇವಿಕಾ ಯೋಗ ಕೇಂದ್ರದ ಯೋಗ ವಿಜ್ಞಾನ ಶಿಕ್ಷಕಿ ದೇವಿಕಾ. ಪುರುಷೋತ್ತಮ ರವರಿಂದ ಯೋಗ ತರಬೇತಿ ಶಿಬಿರವು ನಗರದ ಪುರ ಭವನ ದಲ್ಲಿ ಇಂದು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್ ಪಿ ಉದ್ಘಾಟಿಸಿದರು.
























ಎಸಿಪಿ ಗೀತಾ ಕುಲಕರ್ಣಿ ಮಾತನಾಡುತ್ತಾ, ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಜೊತೆಗೆ ಶಿಸ್ತು,ಸಂಯಮವನ್ನು ರೂಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಗ ಅಭ್ಯಾಸ ಉತ್ತಮ ಎಂದರು. ಸಿಸಿಆರ್ ಬಿ ಎಸಿಪಿ ಕೃಷ್ಣ ಮೂರ್ತಿ, ಯೋಗ ಗುರು ದೇವಿಕಾ ಪುರುಷೋತ್ತಮ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು. ಎಎಸ್ಐ ಲಕ್ಷ್ಮಿಶ ಕಾರ್ಯಕ್ರಮ ನಿರೂಪಿಸಿದರು.ಎಸಿಪಿ ಕೃಷ್ಣ ಮೂರ್ತಿ ವಂದಿಸಿದರು
