‘ಆಳ್ವಾಸ್ ಯುವಸಿರಿ’ ಅಧ್ಯಕ್ಷರ ಆಯ್ಕೆಗೆ ಆಹ್ವಾನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ಆಯೋಜಿಸುತ್ತಿರುವ ‘ಆಳ್ವಾಸ್ ಯುವಸಿರಿ-2027’ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನವು ಜನವರಿ 09ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದ್ದು ಈ ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಂದ ವಿವರಗಳನ್ನು ಆಹ್ವಾನಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ದ ಅಧ್ಯಕ್ಷ ಡಾ|ಎಂ.ಮೋಹನ ಆಳ್ವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಷಣ, ಸಾಹಿತ್ಯ ರಚನೆ ಹಾಗೂ ವಿಶಿಷ್ಟ ಕಲಾ ಸಾಧಕ ವಿದ್ಯಾರ್ಥಿಗಳು ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಆಯ್ಕೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ ಪತ್ರ, ಸ್ವಪರಿಚಯ, ಪ್ರಮಾಣಪತ್ರ ಹಾಗೂ ಸಂಪರ್ಕ ಸಂಖ್ಯೆಯೊಂದಿಗೆ ನವಂಬರ್ 25ರ ಒಳಗೆ ಕಳುಹಿಸಿಕೊಡಬೇಕು. ಡಿಸೆಂಬರ್ ಮೊದಲ ವಾರದಲ್ಲಿ ವಿದ್ಯಾಗಿರಿಯ ಆವರಣದಲ್ಲಿ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.

ಆಯ್ಕೆ ಪ್ರಕ್ರಿಯೆಯು ಬರಹ, ಆಶುಭಾಷಣ ಹಾಗೂ ಸಂದರ್ಶನವನ್ನು ಒಳಗೊಂಡಿರುತ್ತದೆ. ಯುವಸಿರಿಯ ಅಧ್ಯಕ್ಷತೆ, ಯುವ ಉಪನ್ಯಾಸ, ಕವನ ವಾಚನ ಹಾಗೂ ಕಲಾ ಅಭಿವ್ಯಕ್ತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಯುವಸಿರಿಯಲ್ಲಿ ಅವಕಾಶವನ್ನು ನೀಡಲಾಗುವುದು.

ಆಸಕ್ತ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ‘ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ – 574227, ದ.ಕ.’ ಈ ವಿಳಾಸಕ್ಕೆ ಅಥವಾ ಈಮೇಲ್ info@alvas.org ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. (ಹೆಚ್ಚಿನ ಮಾಹಿತಿಗಾಗಿ 9845714371, 8310445081 ಸಂಖ್ಯೆಯನ್ನು ಸಂಪರ್ಕಿಸಬಹುದು)

Leave a Reply

Your email address will not be published. Required fields are marked *