ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಆಶ್ರಯದಲ್ಲಿ ನವಂಬರ್ 25 ಮತ್ತು 26 ರಂದು ಸಂಜೆ 6.45 ಕ್ಕೆ ಆಳ್ವಾಸ್ ಕ್ಯಾಂಪಸ್ ನಲ್ಲಿರುವ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹೆಗ್ಗೋಡಿನ ನೀನಾಸಂ ತಿರುಗಾಟದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.


ನ. 25 ರಂದು ಪ್ರಸಿದ್ಧ ರಾಜಕಾರಣಿ, ಲೇಖಕರಾದ ಡಾ.ಕೆ.ವಿ. ಶಂಕರ ಗೌಡ ರಚಿಸಿದ, ಮಂಜು ಕೊಡಗು ನಿರ್ದೇಶನದ ‘ಪಾದುಕಾ ಕಿರೀಟಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ನ.26 ರಂದು ಮರಾಠಿ ಮೂಲ ಪ್ರಸಿದ್ಧ ಸಾಹಿತಿ ಮಹೇಶ್ ಎಲ್ಕುಂಚವಾರ್ ರಚಿಸಿ, ನಂದಿನಿ ಕೆ.ಆರ್ ಮತ್ತು ಪ್ರಶಾಂತ್ ಹಿರೇಮಠ ಕನ್ನಡಕ್ಕೆ ಅನುವಾದಿಸಿದ, ಮಂಜು ಕಾಸರಗೋಡು ನಿರ್ದೇಶಿಸಿದ ‘ಕೊಳ’ ಎಂಬ ನಾಟಕವು ಪ್ರದರ್ಶನಗೊಳ್ಳಲಿದೆ.
ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ನಾಟಕೋತ್ಸವಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ. ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
