Fudar Film Productions ನಿರ್ಮಾಣದ ಕೊಂಕಣಿ ಚಲನಚಿತ್ರ ಆಶೀರ್ವಚನ ಹಾಗೂ ಉದ್ಘಾಟನಾ ಸಮಾರಂಭ

ಇಂದು ಮೇ 22, 2026 ಬೆಳಿಗ್ಗೆ 9:30 ಗಂಟೆಗೆ ನರಿಂಗಾಣದ St. Lawrence Church, ಬೋಳಾ ನಲ್ಲಿ ಹೊಸ ಕೊಂಕಣಿ ಚಿತ್ರದ ಆಶೀರ್ವಾದ ಹಾಗೂ ಉದ್ಘಾಟನಾ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ಫಾ. ರೆಜಿನಾಲ್ಡ್ ಡಿಸೋಜಾ ಹಾಗೂ ಸಹಾಯಕ ಧರ್ಮಗುರು ಫಾ. ಜಾಯ್ ಸೆಬಾಸ್ಟಿಯನ್ ಉಪಸ್ಥಿತರಿದ್ದರು.

ಫಾ. ರೆಜಿನಾಲ್ಡ್ ಡಿಸೋಜಾ ಅವರು ಚಿತ್ರದ ಯೋಜನೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿದರು. ನಂತರ ಚಿತ್ರದ ಉದ್ಘಾಟನೆಯನ್ನು ಕ್ಲಾಪ್‌ಬೋರ್ಡ್ ಹೊಡೆದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಈ ಚಿತ್ರವನ್ನು Fudar Film Productions ನಿರ್ಮಿಸುತ್ತಿದ್ದು, ಸಂಸ್ಥಾಪಕರಾದ ನಿರ್ಮಾಪಕ ವಿಜಯ್ ಅಶ್ವಿನ್ ಕಾರ್ಡೋಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅವರು ಈ ಚಿತ್ರದ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ನಿರ್ಮಾಪಕರಾದ ಡೆರಿಕ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರದ ನಿರ್ದೇಶಕರು ಹಾಗೂ ಕಥೆಗಾರರಾದ ರೋಲ್ವಿನ್, ಸ್ಟ್ಯಾನಿ ಅಪೋಸ್ ಮತ್ತು ಸುಜಿತ್ ತಂಡವನ್ನು ಪರಿಚಯಿಸಿದರು. ತಾಂತ್ರಿಕ ತಂಡ, ಕಲಾ ತಂಡ, ನಿರ್ದೇಶಕರ ತಂಡ ಸೇರಿದಂತೆ ಹಲವಾರು ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಎಲಿಯಾಸ್ ಡಿಸೋಜಾ ಹಾಗೂ ಕ್ಯಾಥೋಲಿಕ್ ಸಭಾ ಬೋಳ ಘಟಕದ ಅಧ್ಯಕ್ಷರಾದ ಜೋಸೆಫ್ ಕುಟಿನ್ಹಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *