ಮೂಡುಬಿದಿರೆ: ಭಾರತ ಸರಕಾರ ಕೇಂದ್ರ ಹಣಕಾಸು ವಿಭಾಗದ ಜಾಯಿಂಟ್ ಸೆಕ್ರೆಟರಿ ಸಚಿನ್ ಜೈನ್, ಐ.ಎ ಎಸ್ ಅಧಿಕಾರಿ, ಜೈನ ಕಾಶಿ ಮೂಡುಬಿದಿರೆ ಬಸದಿಗಳ ದರ್ಶನ ಮಾಡಿ ಶ್ರೀ ದಿಗಂಬರ ಜೈನ ಮಠದ ಭಗವಾನ್ ಪಾರ್ಶ್ವನಾಥ ಸ್ವಾಮಿ ಮಹಾಮಾತೆ ಕುಷ್ಮಾoಡಿನೀ ದೇವಿ ಹಾಗೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಗಳ ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂಧರ್ಭ ಪ.ಪೂ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ, ಸಚಿನ್ ದಂಪತಿಗಳಿಗೆ ಶಾಲು ಸ್ಮರಣಿಕೆ ಶ್ರೀ ಫಲ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವಾದ ಮಾಡಿದರು.
