ಉಜಿರೆ: ಪಾಣೆಮಂಗಳೂರಿನಲ್ಲಿರುವ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರೂ. 5.00 ಲಕ್ಷ ಅನುದಾನವನ್ನು ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಬಸದಿಯ ಅರ್ಚಕರಾದ ಧರಣೇಂದ್ರ ಇಂದ್ರ ಅವರಿಗೆ ಅನುದಾನವನ್ನು ಹಸ್ತಾಂತರಿಸಿ, ಜೀರ್ಣೋದ್ಧಾರ ಕಾರ್ಯವು ಸುಸೂತ್ರವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾವೀರ ಅಜ್ರಿ ಉಪಸ್ಥಿತರಿದ್ದರು.
