ಬನ್ನಡ್ಕದಲ್ಲಿ ಕಾರು ಬೈಕ್ ಢಿಕ್ಕಿ ಇಬ್ಬರ ಸ್ಥಿತಿ ಗಂಭೀರ

ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ಬನ್ನಡ್ಕ ದೈವಸ್ಥಾನದ ಸಮೀಪ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿರುವ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೂರಜ್ ಹಾಗೂ ಸಂಬಂಧಿಕ ಗಾಯಾಳು ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿಯ ಅರೆಬರೆ ಕಾಮಗಾರಿಯಿಂದಾಗಿ ಇತ್ತೀಚಿಗೆ ಹಲವಾರು ಅಪಘಾತಗಳು ಈ ಪ್ರದೇಶದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಕೆಲವು ಕಡೆ ಉತ್ತಮ ರೀತಿಯ ರಸ್ತೆಗಳಿದ್ದು ಚಾಲಕರು ಅತಿ ವೇಗವಾಗಿ ಆಗಮಿಸುವ ಕಾರಣ, ಒಮ್ಮಿಂದೊಮ್ಮೆಗೆ ಹಾಳಾದ ರಸ್ತೆಯ ಗಲಿಬಿಲಿಗೆ ಒಳಗಾಗಿ ಈ ರೀತಿಯ ದುರ್ಘಟನೆಗಳು ಸಂಭವಿಸುತ್ತಿವೆ. ಈ ಬಗ್ಗೆ ಸೂಕ್ತ ಸುರಕ್ಷತಾ ಸೂಚನೆಗಳನ್ನು ಅಳವಡಿಸಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಬಗ್ಗೆ ತಿಳಿದು ಬಂದಿದೆ. ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ. 

Leave a Reply

Your email address will not be published. Required fields are marked *