ಮಂಗಳೂರು: ಮಳೆಹಾನಿಯಿಂದ ಉಂಟಾದ ನಷ್ಟ,ಕಾಮಗಾರಿಗಳನ್ನು ಪುನರ್ ಕೈಗೆತ್ತಿಕೊಳ್ಳಲು ಸರಕಾರದಿಂದ  10ಕೋಟಿ ರೂಪಾಯಿ ಅನುದಾನ – ಐವನ್‌ ಡಿʼಸೋಜಾ

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಹಾನಿಯಿಂದ ಕುಸಿದುಬಿದ್ದ ನಷ್ಟಗೊಂಡ ಪ್ರದೇಶಗಳಲ್ಲಿ   ಕಾಮಗಾರಿಗಳನ್ನು ಪುನರ್‌ ಕೈಗೊಳ್ಳಲು ರಾಜ್ಯ ಸರ್ಕಾರಿಂದ ಸುಮಾರು  10ಕೋಟಿ ಬಿಡುಗಡೆಗೊಂಡು ಸುಮಾರು 18 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.  ಈ ಕಾಮಗಾರಿಗಳಿಗೆ ಈಗ ಟೆಂಡರ್‌ ಕರೆಯಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡು  ಮಳೆಗಾಲಕಿಂತ ಮೊದಲೇ ಈ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಅಧಿಕಾರಿಗಳಿದೆ ಐವನ್‌ ಡಿʼಸೋಜಾರವರು ಸೂಚಿಸಿದರು. ಜೊತೆಗೆ ಎಲ್ಲಾ ಕಾಮಗಾರಿಗಳು ನಡೆಯಬೇಕಿದ್ದ ಪ್ರದೇಶಗಳಿಗೆ ಇಂಜಿನಿಯರ್‌ ಹಾಗೂ ಸ್ಥಳೀಯ ನಾಯಕರೊಂದಿಗೆ ಭೇಟಿ ನೀಡಿದರು. ಬಿಜೈ 31ನೇ ವಾರ್ಡಿನ ಆನೆಗುಂಡಿ ಆಶ್ರಯ ಆಶ್ರಮದ ಬಳಿ ಹಾಗೂ ನಂದಗೋಕುಲ ಅಪಾರ್ಟ್‌ಮೆಂಟ್‌ ಬಳಿ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ 30.ಲಕ್ಷ ರೂಪಾಯಿ, ಕೊಡಿಯಾಲ್‌ಬೈಲ್‌ ವಾರ್ಡಿನ ಹಿಂಭಾಗದ ಸ್ಟೆಲ್ಲಾಡೋರ್‌ ವೇಗಸ್‌  ಮನೆ ಬಳಿ ಹಾಗೂ ಬಳ್ಳಾಲ್‌ ಬಾಗ್‌ ಶರಾವತಿ ಅಪಾರ್ಟ್‌ಮೆಂಟ್‌  ಬಳಿ ರಾಜ ಕಾಲುವೆ ಬದಿ ತಡೆಗೋಡೆ ನಿರ್ಮಣ ಕಾಮಗಾರಿ ಸುಮಾರು 30.ಲಕ್ಷ ರೂಪಾಯಿ, ವಾರ್ಡ್‌ ಸಂಖ್ಯೆ 32ರ ಕದ್ರಿ ಉತ್ತರ ಸರ್ಕಿಟ್‌ ಹೌಸ್‌ ನ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಇದು ಅತ್ಯಂತ ಪ್ರಮುಖವಾದ ರಸ್ತೆ ಈ ಕಾಮಗಾರಿಗೆ  1ಕೋಟಿ 90ಲಕ್ಷ  ರೂಪಾಯಿ, ವಾರ್ಡ್‌ ಸಂಖ್ಯೆ 40ರ ಮಂಗಳೂರು ಕೋರ್ಟ್‌ ವಾರ್ಡ್‌ನ ಸಿಟಿ ಹಾಸ್ಪಿಟಲ್‌ ಎದರುಗಡೆ  ರಾಜಕಾಲುವೆ ನಿರ್ಮಾಣ  ಕಾಮಗಾರಿಗೆ 30ಲಕ್ಷ ರೂಪಾಯಿ, ವಾರ್ಡ್‌ ಸಂಖ್ಯೆ 38ರ  ಮಂಗಳೂರು ಬೆಂದೂರ್‌ ವೆಲ್‌ನ ಗೀತಾಂಜಲಿ ಎದುರು  ತಡೆಗೋಡೆ ಅಭಿವೃದ್ದಿ ಕಾಮಗಾರಿಗೆ 30ಲಕ್ಷ ರೂಪಾಯಿ, ಈ ಸ್ಥಳೀಯ ಕಾಮಗಾರಿಗಳನ್ನು ಪರಿಶೀಲಿಸಿ ಐವನ್‌ ಡಿʼಸೋಜಾರವರು ಜೊತೆ ಅಧಿಕಾರಿಗಳು ಕೂಡ ಈ ಪ್ರದೇಶಕ್ಕೆ ಬೇಟಿ ನೀಡಿದ್ದು, ಸದ್ರಿ ಕಾಮಗಾರಿಗಳನ್ನು ಕೂಡಲೇ ಕಾರ್ಯಗತಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಅನೇಕ ನೀರು ಹರಿಯುವ ತೋಡುಗಳಲ್ಲಿ ಹೂಳು (ಮಣ್ಣು)  ತುಂಬಿ ನೀರು ಸರಾಗವಾಗಿ ಹರಿಯಲು ತೊಂದರೆ ಉಂಟಾಗುತ್ತಿದ್ದು ಈ ಹೂಳೆತ್ತುವ ಕೆಲಸವನ್ನು ಕೂಡಲೇ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹೂಳೆತ್ತುತ್ತವ ಕಾಮಗಾರಿಗೆ ಸುಮಾರು ರೂ.3.50ಕೋಟಿ ರೂಪಾಯಿಗಳು ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದು, ಎಲ್ಲೆಲ್ಲಿ ಹೂಳೆತ್ತುವ ಕಾಮಗಾರಿ ಇದೆಯೋ ಅದನ್ನು ಗುರುತಿಸಿ ಕೆಲಸ ಕಾರ್ಯಗಳನ್ನು ಕೈಗತ್ತಿಕೊಳ್ಳಬೇಕೆಂದು ಐವನ್‌ ಡಿಸೋಜಾರವರು ತಿಳಿಸಿದರು.

ರಾಜ್ಯ ಸರ್ಕಾರ ಇವತ್ತು ಯುಜಿಡಿ ಕೆಲಸಕ್ಕೆ ಬಹಳಷ್ಟು ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಒಳಚರಂಡಿ ನೀರು, ನೀರು ಹರಿಯುವ ತೋಡುಗಳಲ್ಲಿ ಹರಿಯುವುದನ್ನು ತಡೆಗಟ್ಟಲು ದೊಡ್ಡ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಸರಕಾರವನ್ನು ಈಗಾಗಲೇ ಐವನ್‌ ಡಿʼಸೋಜಾ ಒತ್ತಾಯಿಸಲಾಗಿದ್ದು  1250 ಕೋಟಿ ರೂಪಾಯಿಯ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯನ್ನು ಜಾರಿಗೆ ತರಲು ವಿಧಾನ ಪರಿಷತ್‌ನಲ್ಲಿ ಸಚಿವರ ಮತ್ತು ಸರಕಾರದ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಪ್ರಕ್ರಿಯೆಗಳು   ನಡೆಯುತ್ತಿವೆ ಎಂದು ಐವನ್‌ ಡಿʼಸೋಜಾ ತಿಳಿಸಿದ್ದಾರೆ.

ಈ ಒಂದು ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಅತ್ಯಂತ ವೇಗವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಿಯತಕಾಲದಲ್ಲಿ ಕಾಮಗಾರಿಗಳನ್ನು ಮುಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಐವನ್‌ ಡಿʼಸೋಜಾ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೋರೇಟರ್‌ಗಳಾದ ನವೀನ್ ಡಿಸೋಜಾ, ಲ್ಯಾನ್ಸ್ಲಾಟ್ ಪಿಂಟೋ, ಡಿ.ಕೆ. ಅಶೋಕ್, ಪ್ರಕಾಶ್ ಸಾಲಿಯಾನ್, ವಿನಯ್ ರಾಜ್, ಪ್ರೇಮ್ ಬಲ್ಲಾಳ್‌ಬಾಗ್, ಮ.ನ.ಪ ಎಂಜಿನಿಯರ್ ನಿತ್ಯಾನಂದ, ಮಂಜುನಾಥ್ ಚಿನ್ಮಯಿ, ಸೈದಾ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷರುಗಳಾದ ವರುಣ್ ದೇವಾಡಿಗ, ಓಸ್ವಾಲ್ಡ್ ಬೆಂದೂರುವೆಲ್, ರಾಜೇಶ್ ಬೆಂಗ್ರೆ ಕಾಂಗ್ರೆಸ್ ಪಕ್ಷದ ನಾಯಕರುಗಳಾದ, ಆಲಿಸ್ಟನ್ ಡಿ’ಕುನ್ನಾ, ಜಯ ಪೂಜಾರಿ, ಜಗದೀಶ್ ಕುಲಾಲ್, ವಸಂತ್ ಬಿಜೈ, ಗೌತಮ್ ಕಾಪಿಕಾಡ್, ಸುದೀರ್ ಬಿಜೈ, ಸಂತೋಷ್ ಬಿಜೈ, ಕ್ಲೈಡ್ ಡಿಸೋಜಾ ಜೊತೆಗಿದ್ದರು.

Leave a Reply

Your email address will not be published. Required fields are marked *