ಮಂಗಳೂರು: ಶಕ್ತಿ ವಿದ್ಯಾಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ

ಮಂಗಳೂರು: ಶಕ್ತಿ ವಸತಿ ಶಾಲೆ, ಶಕ್ತಿನಗರ ಮಂಗಳೂರು ಮಾ 7 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೋಷಕರಾದ ಪೂರ್ಣಿಮ ಭಟ್ ಸೀನಿಯರ್ ಇನ್ಸ್‍ಪೆಕ್ಟರ್ ಆಫ್ ಮೋಟರ್ ವೆಹಿಕಲ್ಸ್ ಆರ್.ಟಿ.ಒ ಮಂಗಳೂರು, ಪೂರ್ಣಿಮ ಭಟ್ ಸೀನಿಯರ್ ಇನ್ಸ್‍ಪೆಕ್ಟರ್ ಆಫ್ ಮೋಟರ್ ವೆಹಿಕಲ್ಸ್ ಆರ್.ಟಿ.ಒ ಮಂಗಳೂರು, ಡಾ. ಪರಿಣಿತ ಸಂಜೀವ್ ನಾಯ್ಕ್ ಎಂಬಿಬಿಎಸ್ ಎಮ್.ಡಿ ಫಾರೆನ್ಸಿಕ್ ಮೆಡಿಸಿನ್, ಮಾನಸ ಪುದುವೆಟ್ಟು ಫೌಂಡರ್ ಆಫ್ ಡಿಜಿಟಲ್ ನ್ಯೂ ಏಜ್ ಮೀಡಿಯಾ – ಡೇ ಟು ಡೇ ನ್ಯೂಸ್ ಇದರ ಸ್ಥಾಪಕರು, ಮಹಾಲಕ್ಷ್ಮಿ ಮೆಹರಾಜ್ – ಮ್ಯಾನೆಂಜಿಗ್ ಡೈರೆಕ್ಟರ್ ಆಫ್ ಮಹಾಲಕ್ಷ್ಮಿ ಎಂಟರ್‍ಪ್ರೈಸಸ್ ಹಾಗೂ ಕರ್ನಾಟಕ ಕ್ಷತ್ರಿಯ ಮಹಿಳಾ ಸಂಘದ ಅಧ್ಯಕ್ಷರು, ಪುನೀತ ವೈ ಬಿ – ಪೋಲೀಸ್ ಕಾನ್ಸ್ಟೇಬಲ್ ಬಂಟ್ವಾಳ್ ಪೋಲೀಸ್ ಠಾಣೆಇವರನ್ನು ಗುರುತಿಸಿ ಗೌರವಿಸಿಲಾಯಿತು ಹಾಗೂ ಅವರು ತೊಡಗಿರುವ ವೃತ್ತಿಯ ಅನುಭವ, ಅವರು ಆ ವೃತ್ತಿ ಆಯ್ಕೆ ಮಾಡಿಕೊಂಡ ಕಾರಣ ಹಾಗೂ ಲಿಂಗಭೇದವಿರುವ ಸಮಾಜದಲ್ಲಿ ಹೇಗೆ ಅದರಿಂದ ಹೊರಗೆ ಬಂದು ಸವಾಲುಗಳನ್ನು ಎದುರಿಸಿದರು ಎನ್ನುವುದರ ಕುರಿತು ಸಂವಾದವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಕ್ತಿ ಸಂಸ್ಥೆಯ ಮಹಿಳಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳಿಗೆ ಉಡುಗೊರೆಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು.

Leave a Reply

Your email address will not be published. Required fields are marked *