ಉಡುಪಿ: ಕರ್ನಾಟಕ ಸರಕಾರದ ಸಮಗ್ರ ಶಿಕ್ಷಣ ಇಲಾಖೆಯ ಉಡುಪಿ ಡಯಟ್ ಆಯೋಜಿಸುತ್ತಿರುವ ಕೆರಿಯರ್ ಮೇಳ ಸಮಿತಿಯ ಓರ್ವ ಸದಸ್ಯನಾಗಿದ್ದು, ಸದ್ರಿ ಸಮಿತಿಯು ಮಾರ್ಚ್ 17 ರಂದು ಮಂಗಳವಾರದಂದು ಉಡುಪಿಯ ಎಂಜಿಏಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ ಮುಂಜಾನೆ 10ರಿಂದ ಸಾಯಂಕಾಲ 5.00 ಗಂಟೆಯ ವರೆಗೆ ವೃತ್ತಿ ದಿಕ್ಸೂಚಿ ಎಂಬ ಕೆರಿಯರ್ ಮೇಳವನ್ನು ಹೈಸ್ಕೂಲು ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಕೊಳ್ಳಲಾಗಿದೆ.

ಸದ್ರಿ ಮೇಳದಲ್ಲಿ ಆಸುಪಾಸಿನ ಹಲವಾರು ಸರಕಾರಿ ಮತ್ತು ಖಾಸಗಿ ವೃತ್ತಿಶಿಕ್ಷಣ ಕಾಲೇಜುಗಳು ಮತ್ತು ಸರಕಾರದ ವಿವಿಧ ಇಲಾಖೆಗಳು ಹಾಗೂ ಬ್ಯಾಂಕುಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ವಿವಿಧ ಇಲಾಖೆಗಳ ವಿದ್ಯಾರ್ಥಿವೇತನ, ಬ್ಯಾಂಕುಗಳಿಂದ ಲಭ್ಯವಾಗುವ ಶಿಕ್ಷಣ ಸಾಲ ಸೌಲಭ್ಯಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗುವುದಲ್ಲದೆ ಮಕ್ಕಳಿಗೆ ಈ ಕುರಿತ ತರಬೇತಿಗಳೂ ಲಭ್ಯವಾಗಲಿವೆ.
