ವರದಿ ರಾಯಿ ರಾಜಕುಮಾರ
ಮೂಡುಬಿದಿರೆ: ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯನಿರ್ವಹಿಸುತ್ತಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು 25-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.




ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ. ಈ ಉತ್ತಮ ಸಾಧನೆಯೊಂದಿಗೆ ರಾಜ್ಯದ ಪ್ರಮುಖ ಪಿಯು ಕಾಲೇಜುಗಳಲ್ಲಿ ವೈಬ್ರೆಂಟ್ ಒಂದಾಗಿ ಗುರುತಿಸಿಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ರಾಂಕ್ ಪಡೆದಿರುವ ವಿದ್ಯಾರ್ಥಿ ಧನುಷ್ ಗುತ್ತಿ , “ನನಗೆ ವಿಜ್ಞಾನ ವಿಭಾಗದಲ್ಲಿ 598 ಅಂಕಗಳನ್ನು ಗಳಿಸಲು ನನ್ನ ಕಾಲೇಜಿನ ಕೊಡುಗೆ ಮಹತ್ತರವಾದುದು. ಕಾಲೇಜಿನಲ್ಲಿ ನಡೆಯುವ ಗೈಡೆಡ್ ಸ್ಟಡಿ ನನಗೆ ಉತ್ತಮ ಅಂಕಗಳಿಸಲು ಸಹಾಯವಾಯಿತು.” ಎಂಬ ಸಂತಸದ ಮಾತುಗಳನ್ನು ವ್ಯಕ್ತ ಪಡಿಸಿದರು.
ವಿಜ್ಞಾನ ವಿಭಾಗದ ರಾಂಕ್ ವಿಜೇತೆ ಸರಸ್ವತಿ ಎಂ.ಎಸ್ ” 593 ಅಂಕ ಬಂದಿರುವುದು ಬಹಳ ಖುಷಿ ಆಯಿತು. ಹಲವು ದಿನಗಳಿಂದ ಉಪನ್ಯಾಸಕರ ಮಾರ್ಗದರ್ಶನ ಮತ್ತು ನಮ್ಮ ಕಾಲೇಜಿನ ನಿರ್ದೇಶಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಎಂಬ ಹರುಷವನ್ನು ವ್ಯಕ್ತ ಪಡಿಸಿದರು. ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಂಕ್ ಪಡೆದಿರುವ ತಸ್ನೀಮ್ ಎಸ್. ಎಂ ” 592 ಅಂಕ ಬಂದಿರುವುದರಿಂದ ಬಹಳ ಸಂತೋಷ ಆಗ್ತಾ ಇದೆ. ನನ್ನ ಕಾಲೇಜಿನ ವಾತಾವರಣ, ಉಪನ್ಯಾಸಕರ ಮಾರ್ಗದರ್ಶನದಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. “ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಲೇಜಿನ ನಿರ್ದೇಶಕರು ಮತ್ತು ಬೋಧಕ ಮತ್ತು ಬೋಧಕೇತರ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ವ್ಯಕ್ತ ಪಡಿಸಿದರು.
