ವರದಿ ರಾಯಿ ರಾಜಕುಮಾರ
ಮೂಡುಬಿದರೆ ತಾಲೂಕು ಪಡುಮಾರ್ನಾಡು ಗ್ರಾಮದ ಪಾಡ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 25 – 26ನೇ ಸಾಲಿನ ವಿವಿಧ ಸ್ಪರ್ಧೆಗಳ ಹಾಗೂ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಗುಲಾಬಿ ಇವರ ಅಧ್ಯಕ್ಷತೆಯಲ್ಲಿ ಎಸ್ ಕೆ ಎಫ್ ಎಲಿಕ್ಸರ್ ನ ನಿರ್ದೇಶಕ ಪ್ರಜ್ವಲ್ ಆಚಾರ್ಯ ಇವರ ಯುವ ಉದ್ಯಮಿ ಪ್ರಶಸ್ತಿ ವಿಜೇತರಾದ ಅನುಷಾ ಪ್ರಜ್ವಲ್ ಆಚಾರ್ಯ ರವರು ವಿತರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ ವಿಜಯಲಕ್ಷ್ಮಿ ವಿ. ಕಾಮತ್. ಪ್ರಸನ್ನ ಶೆಣೈ, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಶೋಭಾ ಜೈನ್ ಮತ್ತು ವಾಸುದೇವ ಆಚಾರ್ಯ ಭಾಗವಹಿಸಿದ್ದರು.


ಏಳನೇ ತರಗತಿಯಿಂದ ಬೇರೆ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸುವುದರೊಂದಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಬಹುಮಾನೊಂದಿಗೆ ಗೌರವಿಸಲಾಯಿತು. ಮಧ್ಯಾಹ್ನ ಸಹಭೋಜನ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮಗಳು ನಡೆದವು ಶಾಲಾ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಬರುವ ಸತೀಶ್ ಮತ್ತು ನೃತ್ಯ ನಿರ್ದೇಶಕಿ ಕೃತಿಕ ಇವರನ್ನು ಗೌರವಿಸಲಾಯಿತು. ಗೌರವ ಶಿಕ್ಷಕರಾದ ಪ್ರತಿಭಾ ಮತ್ತು ಪ್ರಜ್ವಲ್ ,ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಉಪಸ್ಥಿತರಿದ್ದರು. ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು.
