ಬೈಲೂರು: SSLC ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಸಾ ರಾಜ್ಯಕ್ಕೆ ದ್ವಿತೀಯ ಸ್ಥಾನ

ಕಾರ್ಕಳ ತಾಲೂಕು ಬೈಲೂರು ಇಲ್ಲಿನ 2025 -26 ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಸಾ ಬರ್ಬೋಜಾ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಮಾದರಿಯಾಗಿದ್ದಾಳೆ.

ಲಿಸಾಳ ಸಾಧನೆಯ ಹಿಂದೆ ಕುಟುಂಬದ ಪ್ರೇರಣೆ ಮಹತ್ವದ ಪಾತ್ರ ವಹಿಸಿದೆ. ತಂದೆ ಲ್ಯಾನ್ಸ್‌ಲೆಟ್ ಕಿರಣ್ ಬರ್ಬೋಜಾ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ತಾಯಿ ಲವೀನಾ ಮರಿಯ ಪಿಂಟೋ ಬಿ.ಇ.ಎಂ. ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿಯಾಗಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ನನ್ನ ಪೋಷಕರು ನನಗೆ ಸಹಕಾರ ನೀಡಿರುತ್ತಾರೆ. ಶಿಕ್ಷಕರ ಸಾಕಷ್ಟು ಮಾರ್ಗದರ್ಶನ ಹಾಗೂ ನನ್ನ ನಿರಂತರವಾದ ಶ್ರಮದ ಫಲವಾಗಿ ಈ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಮುಂದೆ ಐಎಎಸ್ ಆಗುವ ಗುರಿಯನ್ನು ಹೊಂದಿದ್ದೇನೆ ಎಂದು ವಿದ್ಯಾರ್ಥಿನಿ ಲಿಸಾ ಹೇಳಿದಳು.

Leave a Reply

Your email address will not be published. Required fields are marked *