SSLC Result: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಗುಣಶ್ರೀ ವಿದ್ಯಾಲಯ ಸಂಸ್ಥೆಗೆ ಶೇಕಡಾ 100 ಫಲಿತಾಂಶ

ಸಿದ್ದಕಟ್ಟೆ: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಗುಣಶ್ರೀ ಆಂಗ್ಲ ಮಾಧ್ಯಮ ಶಾಲೆಯ 2025 – 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 80 ಮಂದಿ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಸಂಸ್ಥೆಗೆ ಶೇಕಡ 100 ಫಲಿತಾಂಶ ದಾಖಲಾಗಿದೆ.

80 ವಿದ್ಯಾರ್ಥಿಗಳಲ್ಲಿ 606 ಅಂಕ ಪಡೆದ ಸೃಷ್ಟಿ ಪಿ. ಶೆಟ್ಟಿ, ನಿಕಿತಾ ಎಸ್ ಪೂಜಾರಿ 599, ತನೀಶಾ ಶೆಟ್ಟಿ 594 ಅಂಕಗಳನ್ನು ಪಡೆದು ಕೀರ್ತಿಯನ್ನು ತಂದಿರುತ್ತಾರೆ. 31 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಸಂಸ್ಥೆಯ ಅಧ್ಯಕ್ಷರಾದ ಬಿ. ನಾಗರಾಜ್ ಶೆಟ್ಟಿ ಯವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *