ಸುರತ್ಕಲ್: ಶ್ರೀಕ್ಷೇತ್ರ ಬ್ರಹ್ಮಸ್ಥಾನ ಗರೋಡಿ, ಕೊಡಿಪಾಡಿ, ಸುರತ್ಕಲ್ ಕ್ಷೇತ್ರದಲ್ಲಿ ಧರ್ಮದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಏಪ್ರಿಲ್ 28 ರಿಂದ ಮೇ 03 ರ ತನಕ ಭಕ್ತಿಭಾವಪೂರ್ವಕವಾಗಿ ನಡೆಯಲಿದ್ದು, ಈ ಮಹೋತ್ಸವವು ಕ್ಷೇತ್ರದ ಭಕ್ತರಲ್ಲಿ ವಿಶೇಷ ಧಾರ್ಮಿಕ ಉತ್ಸಾಹವನ್ನು ಮೂಡಿಸುವಂತಾಗಿದೆ.

ಈ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ವಿಧಿಗಳು ಹಾಗೂ ಕ್ಷೇತ್ರದ ಆರಾಧ್ಯ ಶಕ್ಷಿಗಳಾದ ಶ್ರೀಧರ್ಮರಸು ಉಳ್ಳಾಯ. ಶ್ರೀಕೊಡಮಣಿತ್ತಾಯ ಮತ್ತು ತುಳುನಾಡಿನ ಕಾರಣೀಕ ಪುರುಷರಾದ ಶ್ರೀಕೋಟಿ-ಚೆನ್ನಯ್ಯ ( ಬ್ರಹ್ಮ-ಬೈದರ್ಕಳ ) ಮತ್ತು ಶಕ್ತಿ ಸ್ವರೂಪಿಣಿಯಾಗಿರುವ ಶ್ರೀಮಾಯಂದಾಲೆ ಧರ್ಮದೈವಗಳ ನೇಮೋತ್ಸವ ಜರುಗಲಿದೆ.
ಮಹೋತ್ಸವವು ಶ್ರೀಕ್ಷೇತ್ರದ ಸಂಪ್ರದಾಯದ ವೈಭವವನ್ನು ಪ್ರತಿಬಿಂಬಿಸಲಿವೆ. ಮಹೋತ್ಸವದ ಅವಧಿಯಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಸಮರ್ಪಕವಾಗಿ ಕಲ್ಪಿಸಲಾಗಿದ್ದು, ದೂರದ ಊರುಗಳಿಂದ ಆಗಮಿಸುವ ಭಕ್ತರಿಗಾಗಿ ಅಗತ್ಯ ಸೌಕರ್ಯಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಶ್ರೀಕ್ಷೇತ್ರದ ಅಭಿವೃದ್ಧಿ ಹಾಗೂ ಪುನರ್-ಪ್ರತಿಷ್ಠೆ ಕಾರ್ಯಗಳನ್ನು ನೆರವೇರಿಸಲು ಸುಮಾರು ಧ್ವಜಸ್ತಂಭ, ರಾಜಗೋಪುರ, ಪ್ರಧಾನ ಮಹಾದ್ವಾರ, ತೀರ್ಥಕೆರೆ.ವಸಂತಕಟ್ಟೆ, ವೆಚ್ಚದಲ್ಲಿ ರಾಜನ್ ದೈವಗಳ ದೈವಸ್ಥಾನ, ಬ್ರಹ್ಮ ಬೈದರ್ಕಳ ಮಾಯಂದಾಲೆ ಶಕ್ತಿಗಳ ಗರೋಡಿಯು ಪುನರ್‌ನಿರ್ಮಾಣವಾಗಿದೆ. ಭಕ್ತರ ಸಹಕಾರ ಮತ್ತು ದಾನಧರ್ಮದ ಫಲವಾಗಿ ಈ ಮಹತ್ವದ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಆದುದರಿಂದ ಊರ-ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಕ್ಷೇತ್ರದ ಧರ್ಮವಗಳ ದರ್ಶನ ಪಡೆದು, ಅವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೇಳಿಕೊಂಡಿದ್ದಾರೆ. ಜೊತೆಗೆ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ಭಕ್ತರಲ್ಲಿ ವಿನಮ್ರ ಮನವಿ ಮಾಡಿಕೊಳ್ಳಲಾಗಿದೆ.
ಈ ಮಹೋತ್ಸವದ ಪ್ರಯುಕ್ತ ನೇರಪ್ರಸಾರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಜಗನ್ನಾಥ ಅತ್ತಾರ್ ಯಜಮಾನರು ಹಾಗೂ ಗಡಿಪ್ರಧಾನರು ಕೊಡಿಪಾಡಿ ಬಾಳಿಕೆ ಸುರತ್ಕಲ್, ರೂಪೇಶ್ ರೈ ಅಧ್ಯಕ್ಷರು ಶ್ರೀಕೊಡಮಣಿತ್ತಾಯ ಶ್ರೀಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ) ಕೊಡಿಪಾಡಿ ಸುರತ್ಕಲ್, ಪದ್ಮರಾಜ್ ಆರ್.ಪೂಜಾರಿ ಕುದ್ರೋಳಿ ಅಧ್ಯಕ್ಷರು ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ, ಇನಾಯತ್ ಆಲಿ ಮುಲ್ಕಿ ಕಾರ್ಯಾಧ್ಯಕ್ಷರು, ಶ್ರೀಕ್ಷೇತ್ರದ ಜೀರ್ಣೋದ್ದಾರ ಸಮಿತಿ ಸುರೇಂದ್ರ ಶೆಟ್ಟಿ ಸಂಚಾಲಕರು ಕ್ಷೇತ್ರಾಡಳಿತ ಹಾಗೂ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
