ಮಂಗಳೂರು: ಭಾರತೀಯ ಕಥೋಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯ, ಅರಣ್ಯ ಇಲಾಖೆ ಮಂಗಳೂರು ವಿಭಾಗ ಹಾಗೂ ಐಸಿವೈಎಮ್ ಇಸಿಡಿ, ಸಿಟಿ ಮತ್ತು ಮಂಗಳೂರು ದಕ್ಷಿಣ ವಲಯ ಇದರ ಸಹಯೋಗದಲ್ಲಿ ಕಲ್ಲಾಪು, ತೊಕ್ಕೊಟ್ಟು ಪರಿಸರದಲ್ಲಿ ಮ್ಯಾಂಗ್ರೂವ್ ಪ್ಲಾಂಟೇಶನ್ ಡ್ರೈವ್ ಮೇ ತಿಂಗಳ ಮೂರನೆಯ ದಿನದಂದು ಬೆಳಿಗ್ಗೆ 6 ಗಂಟೆಯಿಂದ 8.30 ಗಂಟೆ ವರೆಗೆ ನಡೆಯಿತು.



ಅರಣ್ಯ ಇಲಾಖೆಯ RFO ರಾಜೇಶ್ ಹಾಗೂ ಐಸಿವೈಎಮ್ ನೀರ್ದೆಶಕ ವಂ. ಆಶ್ವಿನ್ ಕಾರ್ಡೊಜ, ಅಧ್ಯಕ್ಷ ವಿಜೋಯ್ ಹಾಗೂ ಕಾರ್ಯದರ್ಶಿ ಮರಿಯ ಜೊತೆಗೆ ಹಲವು ಯುವಕ ಯುವತಿಯರು ಈ ಕಾರ್ಯಕ್ರಮದ ಯಶಸ್ಸಿಗೆ ಸುಮಾರು 5000 ಗಿಡಗಳನ್ನು ನೆಟ್ಟು ಸಹಕರಿಸಿದರು.
