ನಮ್ಮಲ್ಲಿ ಜನ ಎಷ್ಟೋ ದಿನಗಳ ನಂತರ ಯಾರಾದರು ಭೇಟಿಯಾದರೆ ಮೊದಲು ಅರ್ಥವಿಲ್ಲದ ಪ್ರಶ್ನೆಗಳು ಕೇಳುತ್ತಾರೆ ಸಾಕಷ್ಟು ನಮ್ಮ ಅನುಭವಕ್ಕೂ ಬಂದಿರುತ್ತದೆ. ಸಡನ್ನಾಗಿ ಯಾರೋ ಭೇಟಿಯಾಗ್ತಾರೆ ಹೇಗಿದ್ದೀಯ ಎಂದು ಕೇಳೋ ಮುಂಚೆ ಹೇಯ್ ಎಷ್ಟು ಸೊರಗಿ ಹೋಗಿದ್ದಿಯಾ? ಅಥವಾ ಎಷ್ಟು ದಪ್ಪ ಆಗಿದ್ದೀಯಾ ಕಣ್ಣ ಸುತ್ತ ಡಾರ್ಕ್ ಸರ್ಕಲ್ ಆಗಿದ್ದಾವೆ ಅರಾಮಿದ್ದಿಯ ತಾನೇ ಏನಾರು ಸಮಸ್ಯೆನ.. ಹಾಗೇನಿಲ್ಲ ಎಂದರು ಇವ್ರು ಕೇಳೋಕೆ ತಯಾರಿರೋಲ್ಲ. ಅವರೋ ಅದೇ ಯೋಚನೇಲಿ ಜೋತು ಮುಖ ಮಾಡಿಕೊಂಡು ಮನೆಗೆ ಹೋಗಿ ಕನ್ನಡಿ ಮುಂದೆ ನಿಂತು ತಮ್ಮನ್ನ ನಾವು ನೋಡುತ ಆ ದಿನ ವ್ಯರ್ಥ ಚಿಂತೆಯಲ್ಲೇ ಕಳೆದು ಬಿಡುತ್ತಾರೆ. ನೆಗೆಟಿವ್ ಕಾಮೆಂಟ್ ಮಾಡೋದು ಕೂಡ.
ಇದು ಒಂದು ರೋಗನೇ ತಾವು ಇರೋ ವಾತಾವರಣದಲ್ಲಿ ನಕಾರಾತ್ಮಕತೆ ಹರಡಿಸುವುದು ಇವರ ಕೆಲಸ ..ಅದು ಅವರ ರೂಢಿ ಅಥವಾ ಚಟ. ಒಂದು ಮಗುಗು ಬಿಡಲ್ಲ ನಿಮ್ಮ ಮಗು ಕಪ್ಪಾಗಿದೆ ದಪ್ಪ ಯಾಕಿಲ್ಲ ನೀವು ಊಟ ಮಾಡ್ಸಲ್ಲವಾ. ನಿಮ್ಮ ಮಗು ಮಾತಾಡೋಲ್ಲ ಒಬ್ಬಳೇ ಕೂತು ಹೀಗಾಯಿತಾ ಅಥವಾ ಹೇಗಿತ್ತು ಮಗು ಹೇಗಾಗಿಗೋತು.ಹಿಂತವೇ ಹುಚ್ಚು ಪ್ರಶ್ನೆ ತಲೆ ಬುಡ ಇಲ್ಲದೆ ಇರೋ ಬರಿ ಟೀಕೆಗಳ ಮಾತು.. ಒಂದು ಮಗು ಹೊಸ ಮುಖಗಳ ಮದ್ಯೆ ಹೊಂದಿಕೊಳ್ಳಲು ಕಷ್ಟವಾದಲ್ಲಿ ಮೌನವಿರುತ್ತದೆ. ಎನ್ನೋ ಸಾಮಾನ್ಯ ಜ್ಞಾನನು ಇಲ್ಲದ ಅಜ್ಞಾನಿಗಳಿಗೇನು ಹೇಳ್ಬೇಕು.
ಅರ್ಥವಿಲ್ಲದ ಪ್ರಶ್ನೆಗೆ ಮೌನವೇ ಉತ್ತರ ಎಂಬುದು ಒಂದು ಅದ್ಭುತವಾದ ಜೀವನದ ಪಾಠ.
ಈ ಮಾತಿನ ಹಿಂದಿನ ಮುಖ್ಯ ತಾತ್ಪರ್ಯಗಳೆಂದರೆ
ಸಮಯದ ಉಳಿತಾಯ: ಅರ್ಥಹೀನ ಅಥವಾ ಅನಾವಶ್ಯಕ ಪ್ರಶ್ನೆಗಳಿಗೆ ಉತ್ತರಿಸಿ ಸಮಯ ವ್ಯರ್ಥ ಮಾಡುವುದಕ್ಕಿಂತ, ಮೌನವಾಗಿರುವುದು ಬುದ್ಧಿವಂತಿಕೆ
ಪ್ರಬುದ್ಧತೆ: ಅನಗತ್ಯ ವಾದ-ವಿವಾದಗಳನ್ನು ತಪ್ಪಿಸಲು ಮೌನವು ಶಕ್ತಿಯುತವಾದ ಆಯುಧವಾಗಿದೆ.
ಕುವೆಂಪು ಅವರ ಆಶಯ: ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳಲ್ಲಿ ಇಂತಹ ಸಾಲುಗಳು, ಜೀವನದ ಗೊಂದಲಗಳಿಗೆ ಮತ್ತು ವಾದಗಳಿಗೆ ತಡೆಯೊಡ್ಡುವ ಒಂದು ಮಾರ್ಗವಾಗಿದೆ.
ಒಮ್ಮೆ ಅಮ್ಮನಿಗೆ ಪರಿಚಯದವರು ಭೇಟಿಯಾದರು ಹೇಗಿದ್ದಾರೆ ಅಕ್ಕ ನಿಮ್ಮನ್ನ ಕಂಡು ಬಹಳ ಖುಷಿಯಾಯಿತು. ಎಷ್ಟೋ ವರ್ಷಗಳ ನಂತರವು ನೀವಿನ್ನು ಹಾಗೇ ಇದ್ದೀರಾ ನಾವು ಶಾಲೆಗೆ ಹೋಗುವಾಗ ನಮ್ ಪರಿಸ್ಥಿತಿ ಕೆಟ್ಟದ್ದು ಪೆನ್ ಪುಸ್ತಕಕ್ಕೆ ನೀವು ಸಹಾಯ್ ಮಾಡಿದ್ರಿ ಮರೆಯದ ವ್ಯಕ್ತಿ ನೀವು ಎಂದು ಹೇಳತಾ ಅದೇಷ್ಟು ಖುಷಿಯಿಂದ ಮಾತಾಡಿದ್ರು ಅಂದ್ರೆ ಇವತ್ತಿಗೂ ನೆನಪಾಗ್ತಾರೆ ಆ ದಿನ ಪೂರ್ತಿ ಅಮ್ಮ ಖುಷಿಯಾಗಿದ್ದರು. ನೆಮ್ಮದಿಯ ಭಾವನೆ ಅದೇನೋ ಮನಸ್ಸಿಗೆ ಆಹ್ಲಾದಕತೆ ಸಕರಾತ್ಮತೆಯಿಂದ ಇದ್ದರು ಕಾರಣ ಏನು ಅಂದ್ರೆ ಸಕಾರಾತ್ಮಕ ಶಕ್ತಿ. ಭೇಟಿಯಾದಂತಹ ವ್ಯಕ್ತಿಯ ಸಕಾರಾತ್ಮಕತೆಯ ಹರಡಿಸಿದ್ದರು ಒಳ್ಳೆಯ ವಿಚಾರಗಳು ಮಾತುಗಳು ನಮ್ಮ ಮೇಲೆ ನಮ್ಮ ಸುತ್ತಲೂ ಪ್ರಭಾವ ಬೀಳುತ್ತದೆ. ಮಾತಿನ ಶಕ್ತಿ ಅದರೊಳಗಿನ ಅರ್ಥದಲ್ಲಿರುತ್ತದೆ. ಅದನ್ನು ಅರಿತವನಿಗೆ ಗೌರವವು ತಾನಾಗೆ ದಕ್ಕುತ್ತದೆ. ಸಾಧ್ಯವಾದಷ್ಟು ಒಳ್ಳೆಯದು ನುಡಿಯೊಣ. ನಾವಾಡುವ ಮಾತಿನಲಿ ಅರ್ಥವಿರಲಿ ನಯವಿನಯವಿರಲಿ ಸಿಹಿ ಭಾವದಿಂದ ಕೂಡಿರಲಿ. ಕೇಳುಗನ ಮನಕ್ಕೆ ಮುದ ನೀಡಲಿ..ಮೌನದ ಮೊಗ್ಗೊಡೆದು ಮಾತರಳಲಿ..ಘಮಿಸಲಿ.

ಅಂಜಲಿ ಶ್ರೀನಿವಾಸ್
