ಸಾವತ್ರಿಕ ಜನ್ಮ ದಿನ- Article by Anjali Srinivas

✍️ಅಂಜಲಿ ಶ್ರೀನಿವಾಸ್ ಖಟವಟೆ
ಹುಬ್ಬಳ್ಳಿ

ಅಂದು ಶಾಲೆ ಮೊದಲ ದಿನ ಜೂನ್ 1 ಶಾಲೆಯಲ್ಲಿ ಟೀಚರ್ ಹಾಜರಾತಿ ಹಾಕಿ ಇವತ್ತು ಯಾರ ಜನ್ಮ ದಿನ ಇದೆ? ಎದ್ದು ನಿಲ್ಲಿ ಎಂದರೆ ಒಬರಲ್ಲ ಇಬ್ಬರಲ್ಲ ಹತ್ತಾರು ಜನ ಎದ್ದು ನಿಲ್ಲುತ್ತರೆ..
ಭಾರತದಲ್ಲಿ ಲಕ್ಷಾಂತರ ಜನರ ಜನ್ಮ ದಿನ ಜೂನ್ ಒಂದು.ವಾಟ್ಸಪ್ ಫೇಸ್ಬುಕ್ ಸ್ಟೇಟಸ್ ಗಳಂತೂ ಶುಭಾಶಯಗಳ ಮಹಾಪೂರವೆ ಹರಿದಾಡುತ್ತಿರುವತ್ತದೆ . ಜೂನ್ 1 ಗೆ ಹುಟ್ಟಿದೊರಾಗೆಲ್ಲ ಹುಟ್ಟು ಹಬ್ಬದ ಶುಭಾಶಯಗಳು ಎಂದು ಸಾವತ್ರಿಕವಾಗಿ ಶುಭಾಶಯ ಕೋರುತ್ತಾರೆ

ಭಾರತದಲ್ಲಿ ಜೂನ್ 1 ರಂದು ಬಹಳಷ್ಟು ಜನರ ಹುಟ್ಟುಹಬ್ಬ ಇರೋದಕ್ಕೆ ಮುಖ್ಯ ಕಾರಣ ಇತಿಹಾಸದ ದಾಖಲೆ ವ್ಯವಸ್ಥೆ.

ಮುಖ್ಯ ಕಾರಣ: ಶಾಲಾ ದಾಖಲಾತಿ

  1. ಹಳೆಯ ಕಾಲದಲ್ಲಿ ಜನನ ನೋಂದಣಿ ಇರಲಿಲ್ಲ
    ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಜನನ ನೊಂದಣಿ ಸಾಮಾನ್ಯವಾಗಿರಲಿಲ್ಲ .ಜನನ ಪ್ರಮಾಣ ಪತ್ರ ಮಾಡಿಸುವ ಪದ್ಧತಿಯು ಇರಲಿಲ್ಲ ತಂದೆ ತಾಯಿಗೆ ನಿಖರವಾದ ಜನ್ಮ ದಿನಾಂಕ ನೆನಪಿರದೆ ಮಳೆಗಾಲದಲ್ಲಿ ಹುಟ್ಟಿದ, ದೀಪಾವಳಿ ಆದ ಮರುದಿನ ಹುಟ್ಟಿದ ಜಾತ್ರೆಯ ಸಮಾದಲ್ಲಿ ಹುಟ್ಟಿದ ಎಂಬಷ್ಟೇ ಮಾಹಿತಿ ಸಿಗುತ್ತಿತ್ತು
  2. ಶಾಲೆಗೆ ಸೇರುವಾಗ ದಿನಾಂಕ ಬೇಕಿತ್ತು
    ಮಗುವನ್ನು ಶಾಲೆಗೆ ಸೇರಿಸಬೇಕಾದರೆ ಹುಟ್ಟಿದ ದಿನಾಂಕ ಕಡ್ಡಾಯ. ಆದರೆ ಪೋಷಕರಿಗೆ ಸರಿಯಾದ ದಿನಾಂಕ ಗೊತ್ತಿಲ್ಲದಿದ್ದಾಗ ಶಿಕ್ಷಕರು ಜೂನ್ 1 ಎಂದು ಬರೆದುಬಿಡುತ್ತಿದ್ದರು.
  3. ಜೂನ್ 1 ಯಾಕೆ?
    ಹೊಸ ಶೈಕ್ಷಣಿಕ ವರ್ಷ ಜೂನ್ 1 ರಂದು ಶುರುವಾಗುತ್ತಿತ್ತು. ಹಾಗಾಗಿ ಶಿಕ್ಷಕರು ಆ ದಿನಾಂಕವನ್ನು ಹಾಕುತ್ತಿದ್ದರು. ಇದರಿಂದ ದಾಖಲಾತಿ ಸುಲಭ ಆಗುತ್ತಿತ್ತು.

ಇದರ ಪರಿಣಾಮವಾಗಿ ಜೂನ್ 1 ರಂದು ಜನ್ಮ ಹೊಂದಿರುವವರ್ ಸಂಖ್ಯೆ ಹೆಚ್ಚಾಯಿತು. ಅನೇಕ ಕುಟುಂಬ ಕಚೇರಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಒಂದೇ ದಿನ ಜನ್ಮ ದಿನ ಆಚರಿಸುತ್ತಿರುವ ಸಂಧರ್ಭ ಕಂಡು ಬಂದವು

“1-6” ಅಥವಾ “ಏಕ್-ಛೆ”
ಇದಕ್ಕೆ ಮುಂಬೈನಲ್ಲಿ “ಏಕ್-ಛೆ” ಅಂತಾನೇ ಹೆಸರು ಬಂದಿದೆ.
ಇಂದಿನ ದಿನಗಳಲ್ಲಿ ಜನನ ನೋಂದಣಿ ಕಡ್ಡಾಯ ಆಗಿರೋದ್ರಿಂದ ಈ ಪದ್ಧತಿ ಕಡಿಮೆಯಾಗಿದೆ. ಆದ್ರೆ 50+ ವಯಸ್ಸಿನ ಭಾರತೀಯರಲ್ಲಿ ಜೂನ್ 1 ಹುಟ್ಟುಹಬ್ಬ ಸಾಮಾನ್ಯ ಸಂಗತಿ . ನಾನು ಆ ಪಟ್ಟಿಯಲ್ಲಿರುವವಳು. ನನ್ನ ಜನ್ಮ ಜೂನ್ 1. ನಿಜವಾದ ಜನ್ಮ ದಿನಣ ? ಅಥವಾ ಶಾಲೆಯ ಜನ್ಮ ದಿನ ನಾ? ಎಂದು ಕೇಳುವವರೇ ಹೆಚ್ಚು.. ನಾನು ನಗುತ್ತಲೇ ಉತ್ತರಿಸುತ್ತೇನೆ
ನಮ್ದು ವಿಶೇಷ ವ್ಯಕ್ತಿಗಳ ಜನ್ಮ ದಿನ ಅಲ್ಲಾ ಸಾಮಾನ್ಯ ಭಾರತೀಯ ಸಾವತ್ರಿಕ ಜನ್ಮ ದಿನ! ತಮಾಷೆಯ ಮಾತಾದರು
….
ಜೂನ್ 1 ನಮ್ಮಲಿ ಅನೇಕರ ಬದುಕಿನ ಸಿಹಿ ನೆನಪು …

Leave a Reply

Your email address will not be published. Required fields are marked *