ವರದಿ ರಾಯಿ ರಾಜಕುಮಾರ್
ಮೂಡುಬಿದಿರೆ: ಭವಿಷ್ಯನಿಧಿ ಪಿಂಚಣಿ ದಾರರಿಗೆ ಕನಿಷ್ಟ ಪಿಂಚಣಿ ರೂ.9000/-ನಿಗದಿ ಪಡಿಸಬೇಕೆಂದು ಭವಿಷ್ಯನಿಧಿ ಪಿಂಚಣಿ ದಾರರ ಸಂಘದ ದ.ಕ.ಜಿಲ್ಲಾ ಸಮಿತಿ ಪ್ರಧಾನ ಕಾರ್ಯಧರ್ಶಿ ಸುಕುಮಾರ್ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.




ಅವರು ಸಮಾಜ ಮಂದಿರದಲ್ಲಿ ನಡೆದ ತಾಲೂಕು ಪಿಂಚಣಿ ದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭವಿಷ್ಯನಿಧಿ ಸಂಸ್ಥೆಯಲ್ಲಿ ವಿತರಣೆಯಾಗದೆ ಉಳಿಕೆ ಮಾಡಿರುವ ಮೊತ್ತವನ್ನು ದುರುಪಯೋಗ ಪಡಿಸದೆ ಪಿಂಚಣಿದಾರರ ಸಂಕಷ್ಟ ಪರಿಹಾರಕ್ಕೆ ಉಪಯೋಗಿಸಬೇಕೆಂದು ತೀಕ್ಷ್ಣವಾದ ಹೋರಾಟವನ್ನು ಸಂಘಟಿಸ ಲಾಗಿದೆ ಎಂದು ಅವರು ಹೇಳಿದರು. ಅತಿಥಿಯಾಗಿ ಸಂಘದ ಜಿಲ್ಲಾಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿಯವರು ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ಸಂಹಿತೆಯಾಗಿಸಿ ಎಲ್ಲಾ ಕಾನೂನು ಬದ್ಧ ಸೌಲಭ್ಯಗಳೊಂದಿಗೆ ಸಾಮಾಜಿಕ ಭದ್ರತೆಯನ್ನೂ ಕಸಿಯುತ್ತಿದೆ ಎಂದರು ರಾಜ್ಯ ಸರ್ಕಾರ ಅವರ ಆಟಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ CITUಜಿಲ್ಲಾ ಮುಂದಾಳು ಗಳಾದ ವಸಂತ ಆಚಾರಿ ಮತ್ತು ಯಾದವ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ರಮಣಿಯವರು ಅಧ್ಯಕ್ಷತೆ ವಹಿಸಿದ್ದರು. ಗಿರಿಜ ಆರಂಭ ಗೀತೆ ಹಾಡಿದರು. ರಾಧಾ ಶ್ರದ್ಧಾಂಜಲಿ ನಿರ್ಣಯವನ್ನು ಮಂಡಿಸಿದರು. ವೇದಿಕೆಯಲ್ಲಿ ಯಮುನಾ ಮತ್ತು ಜಲಜಾಕ್ಷಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಯವರು ವರದಿಯನ್ನು ಮಂಡಿಸಿದರು. ಖಜಾಂಚಿ ಗಿರಿಜರವರು ಲೆಕ್ಕಪತ್ರವನ್ನು ಮಂಡಿಸಿದರು.
ಇದೇ ಸಂಧರ್ಭದಲ್ಲಿ ರಮಣಿಯವರು ಅಧ್ಯಕ್ಷರಾಗಿ, ಲಕ್ಷ್ಮಿಯನ್ನು ಪ್ರಧಾನ ಕಾರ್ಯದರ್ಶಿಯಾಗಿ,ಗಿರಿಜ ಖಜಾಂಚಿಯಾಗಿರುವ 15ಮಂದಿ ಪದಾಧಿಕಾರಿಗಳು ಮತ್ತು 17ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಲಕ್ಷ್ಮಿಯವರು ಸ್ವಾಗತಿಸಿ ವಂದಿಸಿದರು.
