ಸ್ವಸ್ತಿ ಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿನ 2026-27 ನೇ ಸಾಲಿನ ಪಿಯು ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

ಮೂಡಬಿದಿರೆ: ಸ್ವಸ್ತಿ ಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜು ಮೂಡಬಿದಿರೆ ಇದರ 2026-27 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಜೂನ್ 01 ರಂದು ಭಟ್ಟಾರಕ ಸಭಾಭವನ, ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಪ.ಪೂ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾಚಾರ್ಯಪಟ್ಟಾಚಾರ್ಯ ವರ್ಯ ಮಹಾಸ್ವಾಮಿಜಿಯವರು ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಜೈನ ಮಠ ಟ್ರಸ್ಟ್ (ರಿ )ವತಿಯಿಂದ ನೀಡಿದ ಉಚಿತ ಲೇಖನ ಸಾಮಾಗ್ರಿ ವಿತರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಉತ್ತಮ ವರ್ತನೆ ಶಿಸ್ತು ಸಂಯಮ ಗಳಿದ್ದಾಗ ಮಾತ್ರ ವಿದ್ಯೆಗೆ ಗಮನಕೊಡಲು ಸಾಧ್ಯ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾರ್ಜನೆಯನ್ನು ಮಾಡಬೇಕು ಆಗ ಹೆತ್ತವರಿ ಗೆ ಹಾಗೂ ವಿದ್ಯಾರ್ಜನೆ ಮಾಡಿದ ಕಾಲೇಜಿಗೂ ಹೆಸರು ತರಲು ಸಾಧ್ಯ ಎಂದರು. 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವೂ 100% ಬರಲು ಕಾರಣೀಕರ್ತರಾದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕ ವೃಂದ ವನ್ನು ಅಭಿನಂದಿಸಿದರು. ಹಾಗೆಯೇ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಸುಶ್ಮಿತಾ ಹಾಗೂ ಶ್ರುತಿ ಇವರನ್ನು ಶ್ರೀ ಬಾಹುಬಲಿ ಪ್ರಸಾದ್ ನ್ಯಾಯವಾದಿಗಳು, ನೋಟರಿ ಮೂಡುಬಿದಿರೆ ಇವರು ನಗದು ಬಹುಮಾನವನ್ನು ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ವೇತಾ ಜೈನ್ ನ್ಯಾಯವಾದಿಗಳು ನೋಟರಿ ಮೂಡುಬಿದಿರೆ ಇವರು ಉಪಸ್ಥಿತರಿದ್ದರು ಹಾಗೂ ಉದ್ಯಮಿಗಳಾದ ಶ್ರೀ ಮಠದ ಸಂಸ್ಥೆ ಹಿತೈಷಿ ಪ್ರದೀಪ್ ಚಂದ್ರ ಜೈನ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಉಪನ್ಯಾಸಕಿ ಸರಸ್ವತಿ ನಿರೂಪಿಸಿದರು. ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸುಷ್ಮಾ ರವರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *