ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲವಿಹಾರದ UKG ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮ

ಮಾಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಜೂನ್ 01 ಸೋಮವಾರ ದಂದು ಬಾಲವಿಹಾರದ UKG ಮಕ್ಕಳ ಪದವಿ ಪ್ರದಾನ ಕಾರ್ಯಕ್ರಮವು ನಡೆಯಿತು.

ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಗೊಳಿಸಲಾಯಿತು. ಮಕ್ಕಳಿಗೆ ಶಾಲು ಹೂ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಾಲಾ ಸಂಚಾಲಕರಾದ ಸುಧಾಕರ ಡೋಂಗ್ರೆ ಇವರು ಅಧ್ಯಕ್ಷರಾಗಿ ಉಪಸ್ಥಿತರಿದ್ದರು,ಕಾರ್ಯದರ್ಶಿ ಯವರಾದ ಗೀತಾ ಶೇರಿಗಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ನಾಗಭೂಷಣ ಹಾಗೂ ಶಿಕ್ಷಕ ರಕ್ಷಕ ಸಂಘದ ಕೋಶಾಧಿಕಾರಿ ಆಗಿರುವ ರವೀಂದ್ರ ನಾಥ ಜೋಶಿ ಮತ್ತು ದಿನೇಶ್ BSNL ಮತ್ತು ಶಾಲಾ ಮುಖ್ಯ ಪಾಧ್ಯರಾದ ಪೂರ್ಣಿಮಾ ಶೆಣೈ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರತೀಕ್ಷಾ ರವರು ನೀರೂಪಿಸಿ, ಶೋಭಾ ಇವರು ಎಲ್ಲರನ್ನು ಸ್ವಾಗತಿಸಿ, ವಸಂತಿ ಇವರು ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *