ಹದಿ ಹರೆಯದ ಮನವೇ ಹಾದಿ ತಪ್ಪದಿರು – Article by Anjali Srinivas

ನಿಮಗೆ ಗೊತ್ತಾ ಇಂದು ಸಂ…. ಬಂಧ ನಿಷ್ಠೆ ನಂಬಿಕೆ ಪದಗಳ ಬೆಲೆ ಹಗುರವಾಗಿ ಹೋಗತಿದೆ. ಅದೆಷ್ಟು ಜನ ನಿಮ್ಗಳ ಮೊಬೈಲ್ ಯಾವುದೇ ಲಾಕ್ ಇಲ್ಲದೆ ಮನೆಯವರೆಲ್ಲರು ಉಪಯೋಗಿಸುತ್ತೀರಾ ಅಥವಾ ಯಾವುದೇ ಹಿಂಜರಿಕೆ ಇಲ್ಲದೆ ಪತಿ ಪತ್ನಿ ಇಬ್ಬರು ಫೋನ್ ಕೊಡ್ತೀರಾ. ನನಗನಿಸುವ ಪ್ರಕಾರ ತುಂಬಾ ಕಡಿಮೆ ಈ ತರಹ ಇರುವುದು… ಮನೆಯವರ ಫೋನ್ ಚೆಕ್ ಮಾಡೋವಷ್ಟು ಪುರುಸೊತ್ತು ಯಾರಿಗಿದೆ… ಊಟ ಮಾಡೋವಾಗಲೂ ಎಡಗೈಯಲ್ಲಿ ಮೊಬೈಲ್ ಮುಖ ಕೊಟ್ಟು ಮಾತಾಡೋವಷ್ಟು ಸಮಯ ಇಲ್ಲ.

ಅದೇಕೋ ಈ ಹದಿ ಹರಿಯದ ಮನಸ್ಸುಗಳು ಹಾದಿ ತಪ್ಪುತ್ತಿದೆ ಎಂದು ಸಾಕಷ್ಟು ಉದಾಹರಣೆಗಳು ಕಂಡಿರುತ್ತೇವೆ. ವಾಟ್ಸ್ ಅಪ್ನಲ್ಲಿ ಮೆಸೇಜ್ ಗಳು ಅದೆಷ್ಟೋ ಯುವಜನತೆ ಮೆಸೇಜ್ ಅಲ್ಲದೆ ಮದುವೆಯಾದವರು ಮೆಸೇಜ್ ಮಾಡ್ತತಾರೆ, ಯಾವುದೇ ಹಿಂಜರಿಕೆ ಇಲ್ಲದೆ ಖಾಸಗಿ ಫೋಟೋ ಕಳಿಸುತ್ತಾರೆ. ಖಾಸಗಿ ವಿಷಯಗಳನ್ನ ಅಪರಿಚಿತರೊಂದಿಗೆ ಹಂಚಿಕೊಳ್ಳುತ್ತಾರೆ. ಈ ಯುವ ಜನತೆಯ ಉತ್ತರ “ಚಿಲ್ ಇಟ್ಸ್ ಕಾಮನ್ ಜಸ್ಟ್ ಟೈಮ್ ಪಾಸ್ ಅಂತೆ.. ಎಂತಹ ಅದ್ಭುತ ಆಲೋಚನೆಗಳು ನಮ್ಮ ಯುವ ಪೀಳಿಗೆಯದು” ಇಂತಹ ಮಾತು ಕೇಳಿ ದಂಗಾಗಿದ್ದು ಉಂಟು..ಯಾರದ್ದೋ ಹೆಂಡತಿಯನ್ನು ಯಾರೋ ಕ್ಲಬ್ ಹೋಟೆಲಗಳಿಗೆ ತೀರಗೋದು ನೋಡಿದ್ದೀನಿ. ಗಂಡನೇ ಕಳಿಸಿಸೋದಂತೆ. ಅವರು ವಿಶಾಲ ಮನೋಭಾವದವರಂತೆ..ನಮ್ಮ ಬದುಕು ನಮ್ಮ ಆಯ್ಕೆ ಎನ್ನುವರು. ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂದರೇ ಪವಿತ್ರ ಬಂಧನ ಏಳು ಹೆಜ್ಜೆಗಳ ಸಂಬಂಧ ಏಳೇಳು ಜನ್ಮಕ್ಕೂ ಜೊತೆಯಾಗಿರೋಣ ಎಂದು ಪ್ರತಿಜ್ಞೆ ಮಾಡುತ್ತೆವೆ..
ಧರ್ಮೇ ಚ ಅರ್ಥೇ ಚ ಕಾಮೇ ಚ ಮೋಕ್ಷೇ ಚ ನಾತಿಚರಾಮಿ |ಧರ್ಮ, ಅರ್ಥ (ಸಂಪತ್ತು), ಕಾಮ (ಆಸೆಗಳು) ಮತ್ತು ಮೋಕ್ಷ—ಈ ನಾಲ್ಕು ವಿಷಯಗಳಲ್ಲಿ ನಾನು (ಧರ್ಮದ ಮಾರ್ಗವನ್ನು) ಎಂದಿಗೂ ಮೀರಲಾರೆ.

ಇದೇ ಸಪ್ತಪದಿ ಮಂತ್ರ- ಭಾರತೀಯ ವಿವಾಹದ ಜೀವಾಳ. ರಾಮಾಯಣ ಶ್ರೀ ರಾಮನ ಜೊತೆ ಪತ್ನಿ ಸೀತೆಯು ವನವಾಸಕ್ಕೆ ಹೋರಾಡುತ್ತಾಳೆ. ಅಣ್ಣನ ಸೇವೆಗಾಗಿ ಲಕ್ಷ್ಮಣನು ಜೊತೆ ಹೋಗುತ್ತೇನೆ ಹೇಳುತ್ತಾನೆ ಗಂಡನ ಧರ್ಮಕ್ಕೆ ಉರ್ಮಿಳೆಯು ಅಡ್ಡ ಬರಬಾರದು ಎಂದು ಸುಮ್ಮನಿರುತ್ತಾಳೆ 14 ವರ್ಷ ನಿದ್ದೆಯಲ್ಲೇ ಕಳೆಯುತ್ತಾಳೆ.. ಲಕ್ಷ್ಮಣ 14 ವರ್ಷ ನಿದ್ದೆ ಇಲ್ಲದೆಯೇ ಅಣ್ಣನ ರಕ್ಷಣೆಯಲ್ಲೇ ಕಳೆದಿರುತ್ತಾನೆ.
ಸೀತೆಯ ಮುಖವನ್ನು ಲಕ್ಷ್ಮಣ ನೋಡೇ ಇರಲಿಲ್ಲ ಅದೆಷ್ಟು ಪಾವಿತ್ರ್ಯತೆ ನಮ್ಮ ಸಂಸ್ಕೃತಿಯದ್ದು..
ಇಂದು ಗಂಡನಿಗಾಗಿ ಪ್ರಾಣ ತ್ಯಾಗ ಮಾಡುವ ಕಾಲ ಇದಲ್ಲ. ಗಂಡನನ್ನೇ ತ್ಯಾಗ ಮಾಡಿ ಪರ ಪುರುಷನ ಜೊತೆ ಹೋಗುವ ಕಾಲವಿದಾಗಿದೆ.ಎಲ್ಲರು ಹಾಗೆ ಅಂತ ಹೇಳುತ್ತಿಲ್ಲ ಬಹಳಷ್ಟು ಜನ ಪತಿ ಪತ್ನಿ ಪರಸ್ಪರ ಪ್ರೀತಿ ವಿಶ್ವಾಸ ಗೌರವದಿಂದ ಜೀವನ ಸಾಗಿಸುತ್ತಿದ್ದಾರೆ.ಅವರೇ ಸಮಾಜದ ಆಧಾರ… ಎಲ್ಲರು ಸೀತೆ ರಾಮ ಲಕ್ಷ್ಮಣ ಉರ್ಮಿಳೆಯರು ಆಗಲು ಸಾಧ್ಯವಿಲ್ಲ ಆದರೆ ಅವರ ಸ್ಮರಣೆಯಲ್ಲಿ ನಮ್ಮ ಸಂಸ್ಕೃತಿಯ ಗಮ್ಯತೆ ತಿಳಿಯೋಣ…

✍️ ಅಂಜಲಿ ಶ್ರೀನಿವಾಸ ಖಟವಟೆ
ಹುಬ್ಬಳ್ಳಿ

Leave a Reply

Your email address will not be published. Required fields are marked *