ಮೂಡುಬಿದಿರೆ: ಸಾವಿರ ಕಂಬ ಬಸದಿ ಮುಂಭಾಗ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನಮಠ ಮೂಡುಬಿದಿರೆ ಇವರು ದೀಪ ಬೆಳಗಿಸಿ ಸಸಿನೆಟ್ಟು ನ. 11 ರಂದು ಬೆಳಿಗ್ಗೆ 10.00 ಗಂಟೆಗೆ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿ ಸಸ್ಯಾಹಾರ ಮಾನವರಿಗೆ ಉತ್ತಮ ಸಾತ್ತ್ವಿಕ ಆರೋಗ್ಯದಾಯಿಕ ಆಹಾರ ಅಹಿಂಸೆ ಕರುಣೆ ದಯೆ ಧ್ಯಾನಕ್ಕಾಗಿ ಉತ್ತಮ ಆಹಾರ ಆಯ್ಕೆ ಮಾಡುವ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸರ್ವರ ಸಹಕಾರ ಅಗತ್ಯ ಡಾ. ಸುಭಾಷ್ ಪತ್ರಿಜೀ ಅವರ ಪ್ರೇರಣೆ ಯಂತೆ ಪಿರಮಿಡ್ ಸ್ಪಿರಿಚುವಲ್ ಮೂಮೇoಟ್ ಕರ್ನಾಟಕ ಹಾಗೂ ಮೂಡುಬಿದಿರೆ ಶಾಖೆ ವತಿಯಿಂದ ಮೂರು ದಿನಗಳ ಕಾರ್ಯಕ್ರಮದಲ್ಲಿ ಕೊನೆ ದಿನದ ಕಾರ್ಯಕ್ರಮ ಜೈನಕಾಶಿ ಮೂಡುಬಿದಿರೆಯಲ್ಲಿ ಜರುಗಿತು.
