ಅಜೆಕಾರಿನ ಜ್ಞಾನಸುಧಾ ಆಂಗ್ಲ ಮಾಧ್ಯಮ ಹಾಗೂ ಪದವಿಪೂರ್ವ ಕಾಲೇಜು ಲೋಕಾರ್ಪಣೆ

ಕಾರ್ಕಳ: ಅಜೆಕಾರಿನ ಪದ್ಮನಗರ ದಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ಲೋಕಾರ್ಪಣೆ ಏಪ್ರಿಲ್ 14 ರಂದು ನಡೆಯಿತು.
ಕಾಲೇಜಿನ ಶಾರದ ಮೂರ್ತಿ ಹಾಗೂ ರಾಮಲಲ್ಲ ಮೂರ್ತಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಹೆಸರುಗಳಿಸಿದ ಜ್ಞಾನ ಸುಧಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ರಾಷ್ಟ್ರಪ್ರೇಮ ಮೂಡಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಜ್ಞಾನಸುಧ ರಾಜ್ಯದ ನಂಬರ್ ವನ್ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗವಾದ ಅಜೆಕಾರ್ ನಲ್ಲಿ ಪ್ರಾರಂಭವಾದ ಸಂಸ್ಥೆ, ಶಿಕ್ಷಣದ ಜೊತೆಗೆ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರ ಸಹಾಯ ಮಾಡುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಪದವಿಪೂರ್ವ ಕಾಲೇಜು ಉದ್ಘಾಟಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಡಾಕ್ಟರ್ ಸುಧಾಕರ್ ಶೆಟ್ಟಿ ಅವರ ಮಾದರಿ ಸಿಇಟಿ ಪ್ರಾರಂಭವಾದ ಬಳಿಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ಹಂತಕ್ಕೆ ಏರುವಂತಾಗಿ ರುವುದು ತುಂಬಾ ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ ದೇಶದ ಸಂಸ್ಕೃತಿ ಅರಿವು ಮೂಡಿಸಬೇಕು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದ ಬಂಡಾರ ವಾಗಲಿ ಎಂದು ಹೇಳಿದರು.

ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗವನ್ನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ಮೋಹನ ಆಳ್ವ ಉದ್ಘಾಟಿಸಿ ಶಿಕ್ಷಕ ವೃತ್ತಿಯೊಂದಿಗೆ ಶಿಕ್ಷಣ ಸಂಸ್ಥೆ ಕಟ್ಟುವುದು ಆದರ್ಶ ಕಾರ್ಯ ಎಂದು ಹೇಳಿದರು.
ನಿಟ್ಟೆ ಡಾ. ವಿಶಾಲ ಹೆಗಡೆ ಹಾಗೂ ಉದ್ಯಮಿ ಶಿವರಾಂ ಜೆ ಸಂಸ್ಥೆಯ ಪ್ರಯೋಗ ಶಾಲೆಗಳನ್ನು ಉದ್ಘಾಟಿಸಿದರು.
ಸುಧಾಕರ್ ಶೆಟ್ಟಿ ಅವರ ಮಾತ್ರ ಶ್ರೀ ಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ಪದ್ಮನಗರ ಗಣಪತಿ ದೇವರಿಗೆ 108 ಸಿಯಾಳ ಅಭಿಷೇಕ ನಡೆಸಲಾಯಿತು ಹಾಗೂ ಆಸ್ಪತ್ರೆಗಳಿಗೆ ಧನಸಹಾಯ ವಿತರಿಸಲಾಯಿತು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಶಿವರಾಮ ಜಿ ಶೆಟ್ಟಿ ಪ್ರಕಾಶನ ಗೋಪಾಲ್ ಭಂಡಾರಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಂ ಮಂಜುನಾಥ ಪೂಜಾರಿ, ಉದ್ಯಮಿ ಸು ಜಯ ಕುಮಾರ್ ಶೆಟ್ಟಿ , ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಪ್ರತಿಭಾನಿತ್ವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾಲೇಜಿನ ಯೆನ್.ಸಿಸಿ ತಂಡದಿಂದ ಅತಿಥಿಗಳಿಗೆ ಗೌರವ ಸಲ್ಲಿಸಲಾಯಿತು ಡಾಕ್ಟರ್ ಸುಧಾಕರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾಪಿಸಿದರು.

Leave a Reply

Your email address will not be published. Required fields are marked *