ಮಂಗಳೂರು: ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಶುದ್ಧೀಕರಣ ಪ್ರಕರಣದ ವಿವಾದ ಕುರಿತು ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದುರುದ್ದೇಶಪೂರಿತ ಎಫ್.ಐ.ಆರ್ ದಾಖಲೆ ಖಂಡಿಸಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕೀಯ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಲಾಲ್ ಭಾಗ್ ಮ.ನ.ಪಾ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.


ಪತ್ರಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ನಡೆಸಿದ ಜಾಗವನ್ನು ಬಿಜೆಪಿ ನಾಯಕರು ಶುದ್ಧೀಕರಣಗೊಳಿಸಿ ದಲಿತ ಸಮುದಾಯವನ್ನು ಅವಮಾನ ಮಾಡಿರುವುದು ದೇಶ ಕ್ಷಮಿಸುವುದಿಲ್ಲ. ವಿಶ್ವದಲ್ಲಿ ಭಾರತ ತಲೆತಗ್ಗಿಸುವ ಕೆಲಸ ಆಗಿದೆ. ಸಂವಿಧಾನದ ಮೌಲ್ಯಗಳಿಗೆ ಅವಮಾನ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ದೇಶದ ಸಂವಿಧಾನ ಮತ್ತು ಸಂಸ್ಕೃತಿಯ ಪರವಾಗಿ ಧ್ವನಿ ಎತ್ತಿದ ರಾಹುಲ್ ಗಾಂಧಿ ಅವರ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದರು.
ಗಾಂಧಿ ಕುಟುಂಬವನ್ನು ದೇಶದ ಜನರಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಏಕತೆಗಾಗಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಶಾಂತಿ ಸ್ಥಾಪನೆಗೆ ಗಟ್ಟಿ ನಿಲುವು ಕೈಗೊಂಡ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಮತ್ತು ಕೊಡುಗೆಗಳನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಬಿಜೆಪಿಗರ ಟೀಕೆ, ಬೆದರಿಕೆಗಳಿಗೆ ಹೆದರುವ ವ್ಯಕ್ತಿತ್ವ ರಾಹುಲ್ ಗಾಂಧಿ ಅವರದ್ದಲ್ಲ. ದೇಶದ ಜನರ ಪರವಾಗಿ, ಸಂವಿಧಾನದ ರಕ್ಷಣೆಗೆ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮಾತನಾಡಿ, ಬಿಜೆಪಿ ಸರ್ಕಾ ತನ್ನ ವೈಫಲ್ಯಗಳನ್ನು ಮರೆಮಾಚಲು ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ದ್ವೇಷದ ರಾಜಕಾರಣಕ್ಕೆ ಮೊರೆ ಹೋಗುತ್ತಿದೆ. ಬಿಜೆಪಿ ನಾಯಕರು ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಅಪಾಯಕಾರಿ. ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಧ್ವನಿ ಅಡಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೋ, ಸಂತೋಷ್ ಕುಮಾರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್, ಮೋಹನ್ ಕೋಟ್ಯಾನ್ ಮುಲ್ಕಿ, ಭರತ್ ಮುಂಡೋಡಿ, ಸುರೇಂದ್ರ ಕಂಬಳಿ, ಪದ್ಮನಾಭ ಕೋಟ್ಯಾನ್, ಕೆ.ಪಿ.ಥೋಮಸ್, ಕೆ.ಹರಿನಾಥ್ ಜೋಗಿ, ಶಾಹುಲ್ ಹಮೀದ್, ನೀರಜ್ ಚಂದ್ರಪಾಲ್, ಜೋಕಿಂ ಡಿಸೋಜಾ, ನವೀನ್ ಡಿಸೋಜಾ, ಲುಕ್ಮಾನ್ ಬಂಟ್ವಾಳ, ಲಾರೆನ್ಸ್ ಡಿಸೋಜಾ, ವಸಂತ್ ಬೆರ್ನಾಡ್, ಅಬೂಬಕ್ಕರ್ ಕುದ್ರೋಳಿ, ಪ್ರೇಮ್ ನಾಥ್ ಪಿ.ಬಿ, ದಿನೇಶ್ ಮುಳೂರು, ಲ್ಯಾನ್ಸಿ ಲೋಟೊ ಪಿಂಟೋ, ಮಲಾರ್ ಮೋನು, ಅಬ್ಬಾಸ್ ಅಲಿ, ಟಿ.ಕೆ.ಸುಧೀರ್, ಗಿರೀಶ್ ಶೆಟ್ಟಿ, ಡೆನ್ನಿಸ್ ಡಿಸಿಲ್ವ, ಶುಭೋದಯ ಆಳ್ವ, ಸಂಶುದ್ದೀನ್ ಕುದ್ರೋಳಿ, ಮೆಲ್ವಿನ್ ಡಿಸೋಜಾ, ಶಬೀರ್.ಎಸ್, ಪದ್ಮನಾಭ ಅಮೀನ್, ಏರ್ ಪೋರ್ಟ್ ಖಾದರ್, ಎಂ.ಪಿ.ಮನುರಾಜ್, ಭಾಸ್ಕರ್ ರಾವ್, ರಮಾನಂದ ಪೂಜಾರಿ, ಸುಹಾನ್ ಆಳ್ವ, ಯು.ಟಿ. ಫರೀದ್ ಇಫ್ತಿಕರ್, ಗೀತಾ ಅತ್ತಾವರ, ಚಂದ್ರಕಲಾ ಜೋಗಿ, ಸಾರಿಕ ಪೂಜಾರಿ, ನೀತು ಡಿಸೋಜಾ, ಕವಿತಾ ವಾಸು, ಶಾಂತಲ ಗಟ್ಟಿ, ನ್ಯಾನ್ಸಿ ನೊರೋನ್ಹ, ಸೌಹನ್ ಎಸ್.ಕೆ, ಆಬಿದ್ ಅಲಿ ಕದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.
