ಅನಧಿಕೃತ ಗೃಹಲಕ್ಷ್ಮಿ ಸಮೀಕ್ಷೆ: ಒಟಿಪಿ ಹಾಗೂ ಬ್ಯಾಂಕ್ ಮಾಹಿತಿ ಹಂಚಿಕೊಳ್ಳದಂತೆ ಸೂಚನೆ

ಮಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಸರ್ಕಾರದ ಆದೇಶ ಹಾಗೂ ನಿಗದಿತ ಕಾರ್ಯವಿಧಾನದನ್ವಯ ಕೈಗೊಳ್ಳಲಾಗುತ್ತಿದೆ. ಮರುಪರಿಶೀಲನಾ ಅರ್ಜಿಯಲ್ಲಿ ಫಲಾನುಭವಿಯ ಆಧಾರ್‍ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ.

ಫಲಾನುಭವಿಯನ್ನು ಗುರುತಿಸಿ ಒಟಿಪಿ ಮೂಲಕ ದೃಢೀಕರಿಸುವ ಸಲುವಾಗಿ ಆಧಾರ್ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿರುತ್ತದೆ. ಈ ಬಗ್ಗೆ ಇಲಾಖೆಯಿಂದ ಇನ್ನೂ ಯಾವುದೇ ಮರುಪರಿಶೀಲನಾ ಪ್ರಕ್ರಿಯೆ ಪ್ರಾರಂಭವಾಗಿರುವುದಿಲ್ಲ. ಕೆಲವೊಂದು ಕಡೆ ಅನಧಿಕೃತವಾಗಿ ಗೃಹಲಕ್ಷ್ಮಿ ಸಮೀಕ್ಷೆಯ ಬಗ್ಗೆ ಒಟಿಪಿ ಹಾಗೂ ಬ್ಯಾಂಕ್ ಮಾಹಿತಿ ಕೇಳಿದಲ್ಲಿ ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಉಪನಿರ್ದೇಶಕರುಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *