ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ʼಕಾವ್ಯಾಂ ವ್ಹಾಳೊ- 13ʼ ಕೊಂಕಣಿ ಕವಿಗೋಷ್ಟಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಎಪ್ರಿಲ್ 18, 2026 ರಂದು ʼಕಾವ್ಯಾಂ ವ್ಹಾಳೊ-13ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು, ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಕರ್ನಾಟಕ ಸರ್ಕಾರವು ಕೊಂಕಣಿ ಸಮುದಾಯಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಕೊಂಕಣಿ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಕೊಂಕಣಿಗರನ್ನು ಒಗ್ಗೂಡಿಸುವ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ. ಜಾತಿ, ಮತ ಭೇದವಿಲ್ಲದೆ ಎಲ್ಲಾ ಕೊಂಕಣಿಗಳ ಜನರು ಭಾಗವಹಿಸುವುದು ಬಹಳ ಸಂತೋಷವಾಗುತ್ತಿದೆ. ಅಕಾಡೆಮಿಗೆ ಕೊಂಕಣಿ ಜನರು ಯಾವಾಗಲೂ ಹತ್ತಿರವಿರಬೇಕು ಹಾಗೂ ಕೊಂಕಣಿ ಯುವ ಕವಿಗಳಿಗೆ ವೇದಿಕೆ ದೊರೆಯಬೇಕು ಎನ್ನುವ ಉದ್ದೇಶದಿಂದ “ಕಾವ್ಯಾಂ ವ್ಹಾಳೊ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇದ್ದೇವೆ. ಪ್ರತಿಯೊಬ್ಬ ಇದರ ಪ್ರಯೋಜನ ಪಡೆಯಬೇಕೆಂದು ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.

ಮುಖ್ಯ ಅಥಿತಿಗಳಾದ ಕೊಂಕಣಿ ಭಾಷಾ ಮಂಡಳಿ ಕರ್ನಾಟಕ (ರಿ). ಇದರ ಅಧ್ಯಕ್ಷ ರೇಮಂಡ್‌ ಡಿಕುನ್ಹಾರವರು ಮಾತಾನಾಡಿ, ಪ್ರಸ್ತುತ ಅಕಾಡೆಮಿಯ ಸದಸ್ಯರು ತಾವು ಕೊಂಕಣಿಯ ಸದಸ್ಯರೆಂದು ಗರ್ವದಿಂದ ಹೇಳುತ್ತಾರೆ, ಏಕೆಂದರೆ ಅಕಾಡೆಮಿಯಲ್ಲಿ ಅಷ್ಟು ಕೆಲಸವನ್ನು ಅವರು ಮಾಡಿದ್ದಾರೆ ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರು ಒಬ್ಬ ಕೊಂಕಣಿ ಭಾಷೆಯ ಸಂಘಟಕರಾಗಿ ಇದ್ದುದೇ ಇದಕ್ಕೆ ಕಾರಣ ಎಂದು ಅಕಾಡೆಮಿಯ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಕೊಂಕಣಿ ಭಾಷೆಯ ಖಾರ್ವಿ ಸಮುದಾಯದ ಹಿರಿಯ ಕಲಾವಿದರಾದ ಶ್ರೀ ಜೀವನ್‌ದಾಸ್‌ ಖಾರ್ವಿ ಇವರನ್ನು ಸನ್ಮಾನಿಲಾಯಿತು. ಲೇಖಕಿಯಾದ ಕೃತಿಕಾ ಕಾಮತ್‌ ಇವರು ಬರೆದ “ಭಕ್ತಿ ರಸಾಮೃತಂ” ಪುಸ್ತಕವನ್ನು ಈ ಸಂದರ್ಭದಲ್ಲಿ ಅಧ್ಯಕ್ಷರು ಬಿಡುಗಡೆಗೊಳಿಸಿದರು.

ಖ್ಯಾತ ಕವಿಗಳಾದ ಜೋರ್ಜ್‌ ಲಿಗೋರಿ ಡಿಸೋಜಾರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ರೋಶನ್‌ ಕಾಮತ್‌, ಮರಿಯಾ ಪಿಂಟೊ, ವಿಲ್ಫ್ರೆಡ್‌ ಆರ್. ಪಾಂಗ್ಳಾ, ವೆನಿಶಾ ಜೆಸ್ಸಿಕಾ ಸಲ್ಡಾನ್ಹಾ, ರೊಬರ್ಟ್‌ ಮಿನೇಜಸ್‌, ರಾಧಿಕಾ ಪೈ, ರೆನಿಶಾ ರೋನಾ ಲೋಬೊ, ಹೆನ್ರಿ ಮಸ್ಕರೇನ್ಹಸ್ ಮತ್ತು ಸ್ಟೀವನ್ ಕ್ವಾಡ್ರಸ್ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್‌ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು. ಸದಸ್ಯರಾದ ಸಮರ್ಥ್‌ ಭಟ್, ಸಪ್ನಾ ಮೇ ಕ್ರಾಸ್ತಾ, ನವೀನ್‌ ಲೋಬೊ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *