ಲೊರೆಟ್ಟೊ ಸಮುದಾಯ ಸಂಭ್ರಮ ಹಾಗೂ ಧರ್ಮ ಗುರುಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮ

ಪವಿತ್ರಾತ್ಮರ ಪ್ರೇರಣೆಯಿಂದ ಗಟ್ಟಿಯಾದ ಸಮುದಾಯ ಕಟ್ಟೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಲೊರೆಟ್ಟೊ ಮಾತಾ ಚರ್ಚಿನಲ್ಲಿ ಸಮುದಾಯ ಸಂಭ್ರಮ 2026 ಹಾಗೂ ಧರ್ಮ ಗುರುಗಳ ಬಿಳ್ಕೊಡುಗೆ ಸಮಾರಂಭ ಯಶಸ್ವಿಯಾಗಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದ ಧರ್ಮುರುಗಳಾದ ವಂ| ಫ್ರಾನ್ಸಿಸ್ ಕ್ರಾಸ್ತ ರವರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಿಂದ ಸದ್ದಿಲ್ಲದೆ ಅಭಿವೃದ್ಧಿಯ ಹಾಗೂ ಸಮಾಜ ಕಟ್ಟುವ ಕೆಲಸಗಳು ನಡೆಯುತ್ತವೆ . ಇದಕ್ಕೆ ದೇವರ ದಯೆ ಹಾಗೂ ಮಾತೆ ಮರಿಯಮ್ಮನವರ ಆಶೀರ್ವಾದ ಎಷ್ಟು ಮುಖ್ಯವೋ ಪವಿತ್ರಾತ್ಮರ ಪ್ರೇರಣೆಯಿಂದ ಇಂತಹ ಸಮುದಾಯ ಕಟ್ಟಲು ಎಲ್ಲಾ ಬಾಂಧವರು ಕೈಜೋಡಿಸಿ ಕೆಲಸ ಮಾಡಬೇಕು ಹಾಗೂ ತನ್ನ ಆರು ವರ್ಷದ ಅವಧಿಯಲ್ಲಿ ಆಧ್ಯಾತ್ಮಿಕ ಹಾಗೂ ಅಭಿವೃದ್ಧಿಯ ಕೆಲಸ ಕಾರ್ಯಗಳು ನಿಮ್ಮೆಲ್ಲರ, ಪ್ರೀತಿ ಮತ್ತು ಸಹಕಾರದೊಂದಿಗೆ ನಡೆದಿದೆ ಎಂದು ಹೇಳಲು ಸಂತೋಷ ಪಡುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ತಾನು ಋಣಿಯಾಗಿದ್ದೇನೆ ಎಂದು ಭಾವನಾತ್ಮಕ ಸಂದೇಶದಲ್ಲಿ ಧರ್ಮ ಗುರುಗಳು ಹೇಳಿದರು ಧರ್ಮ ಗುರುಗಳು ಕಾಸರಗೋಡು ವಲಯದ ವರ್ಕಾಡಿ ಸೆಕ್ರೆಟ್ ಆರ್ಟ್ ಆಫ್ ಜೀಸಸ್ ಚರ್ಚ್ಗೆ ವರ್ಗಾವಣೆಗೊಳ್ಳಲಿದ್ದಾರೆ. ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಪ್ರಿನ್ಸಿಪಾಲ್ ವಂ. ಜೇಸನ್ ಫ್ರಾನ್ಸಿಸ್ ರವರು ಧರ್ಮಗುರುಗಳ ಬಗ್ಗೆ ಹಿತನುಡಿ ಹಾಗೂ ಅವರ ವ್ಯಕ್ತಿ ಪರಿಚಯ ಸಭೆಗೆ ಮಂಡಿಸಿದರು.

ನಿವೃತ್ತರಾದ ವಾಳೆಯ ಗುರಿಕಾರ್ ರವರಿಗೆ ಸನ್ಮಾನಿಸಲಾಯಿತು. ನಿರ್ಮಲ ಕಾನ್ವೆಂಟಿನ ಸುಪೀರಿಯರ್ ಭಗಿನಿ ಇಡೋಲಿನ್ ರೊಡ್ರಿಗಸ್ ರವರು ಇದನ್ನು ನೆರೆವೆರಿಸಿದರು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರಾದ ಐಸಾಕ್ ವಾಸ್ ರವರು ಸ್ಮರನಿಕ ಪತ್ರವನ್ನು ವಾಚಿಸಿದರು. ಚರ್ಚ್ ಗಾಯನ ಮಂಡಳಿಯ ವತಿಯಿಂದ ವಿದಾಯ ಗೀತೆಯನ್ನು ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಸಂಪಾದಕರಾದ ರೋಶನ್ ಪಿಂಟೊ ರವರ ಮುಂದಾಳುತ್ವದಲ್ಲಿ ಚರ್ಚ್ ಬುಲೆಟಿನ್ ತುರ್ಬೆಂತ್ ಧರ್ಮ ಗುರುಗಳ ವಿದಾಯ ವಿಶೇಷ ಅಂಕವನ್ನು ಆವರಣ ಗೊಳಿಸಲಾಯಿತು. ಪಾಲಾನ ಮಂಡಳಿಯ ಕಾರ್ಯದರ್ಶಿಯಾದ ಆಲ್ವಿನ್ ಪಿಂಟೊ ರವರು ಸ್ವಾಗತಿಸಿದರು. ಆಯೋಗದ ಸಂಯೋಜಕರಾದ ಸಚಿನ್ ನೊರೊನ್ಹಾ ರವರು ಹೊಂದಿಸಿದರು. ಶಿಕ್ಷಕಿ ಸ್ವಾತಿ ಕಾರ್ಲೊ ರವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *