ಕಾರ್ಕಳ, ಅ. 30: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವವು ಫೆ. 18 ರಿಂದ 28 ರ ವರೆಗೆ ನಡೆಯಲಿದ್ದು ಈ ಪ್ರಯುಕ್ತ ನ. 1ರಂದು ಅಟ್ಟಳಿಗೆ ಮುಹೂರ್ತ ನಡೆಯಲಿದೆ.

ನ. 1ರಂದು ಬೆಳಿಗ್ಗೆ 8.30 ರಿಂದ 8.55 ರ ವರೆಗೆ ಶುಭ ಮೂಹೂರ್ತದಲ್ಲಿ ‘ಅಟ್ಟಳಿಗೆ ಮುಹೂರ್ತ’ವು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವ ವಹಿಸಲಿದ್ದಾರೆ. ಧರ್ಮ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದ ಮಹಾಮಸ್ತಕಾಭಿಷೇಕ ಸಮಿತಿ ತಿಳಿಸಿದೆ.
