ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ವಲಯ ಮಟ್ಟದ ಅಥ್ಲೆಟಿಕ್‍ ಕ್ರೀಡಾಕೂಟದಲ್ಲಿ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಯ ಅತ್ಯುತ್ತಮ ಸಾಧನೆ

ಮಂಗಳೂರು ಸೆ. 9: ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರದ ವತಿಯಿಂದ ಹೈದರಾಬಾದ್ ನಾದೇರ್ಗುಲ್ನಲ್ಲಿರುವ ವಿದ್ಯಾಭಾರತಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸೆ. 4 ರಿಂದ 7, 2026 ರ ವರೆಗೆ ಆಯೋಜಿಸಲಾದ ದಕ್ಷಿಣ ಮಧ್ಯಕ್ಷೇತ್ರ ವಲಯ ಮಟ್ಟದ ಅಥ್ಲೆಟಿಕ್‍ ಕ್ರೀಡಾಕೂಟದಲ್ಲಿ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿ ವಿಷ್ಣುರೆಡ್ಡಿ ನಿಂಗಪ್ಪ ಬಿರಾದರ್‍ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
17 ವರ್ಷದೊಳಗಿನ ಬಾಲಕರ ವಿಭಾಗದ 400 ಮೀಟರ್‍ ಓಟದಲ್ಲಿ ಕಂಚಿನ ಪದಕ ಹಾಗೂ 4400 ಮೀಟರ್ ರೀಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ಶಾಲೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಯ ಈ ಅತ್ಯುತ್ತಮ ಸಾಧನೆಗೆ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ. ನಾೈಕ್ ಕಾರ್ಯದರ್ಶಿಗಳಾದ ಸಂಜಿತ್ ನಾೈಕ್, ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಸುರೇಖಾ ಭಟ್‍ ಅವರು ವಿದ್ಯಾರ್ಥಿಯನ್ನು ಅಭಿನಂದಿಸಿ, ಮುಂದಿನ ಸ್ಪರ್ಧೆಗಳಲ್ಲಿಯೂ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ವಿಜೇತ ವಿದ್ಯಾರ್ಥಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *