ತಡರಾತ್ರಿವರೆಗೆ ಪುರಸಭೆ ಮಹಿಳಾ ಸಿಬ್ಬಂದಿಗಳಿಗೆ ಸಭೆ ನಡೆಸಿದ ಯೋಜನಾ ನಿರ್ದೇಶಕ: ಮಹಿಳೆ ಸಿಬ್ಬಂದಿಗೆ ನಿಂದಿಸಿದ ಬಗ್ಗೆ ದೂರಲಾಗಿದೆ

ಕಾರ್ಕಳ: ಕಾರ್ಕಳ ಪುರಸಭೆ ಸಿಬ್ಬಂದಿಗಳಿಗೆ ತಡರಾತ್ರಿ ವರೆಗೆ ಸಭೆ ನಡೆಸಿದ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಮಹಿಳಾ ಸಿಬ್ಬಂದಿಗಳನ್ನು ಗದರಿಸಿ ಬೆದರಿಸಿ ಏಕವಚನ ಬೈದು ಅವಮಾನ ಮಾಡಿ ಕೆಲಸದಿಂದಲೇ ಕಿತ್ತು ಹಾಕುತ್ತೇನೆ ಎಂದು ಸಿಟ್ಟಿನಿಂದ ಅತಿರೇಕವಾಗಿ ವರ್ತಿಸಿದ ಘಟನೆ ಕಾರ್ಕಳ ಪುರಸಭೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬುಧವಾರ ಸಾಯಂಕಾಲ 5.15ಕ್ಕೆ ಕಾರ್ಕಳ ಪುರಸಭೆ ಕಚೇರಿಗೆ ಬಂದ ಯೋಜನಾ ನಿರ್ದೇಶಕ ಸುಬ್ರಮಣ್ಯ ಸೆಟ್ಟಿ ನೇತೃತ್ವದ ತಂಡ ಸಿಬ್ಬಂದಿಗಳನ್ನು ಕಚೇರಿ ಸಮಯವಾದರೂ ಹೋಗದಂತೆ ಅದೇಶಿಸಿ ಪುರಸಭಾ ಮುಖ್ಯಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸುಬ್ರಮಣ್ಯ ಸೆಟ್ಟಿ ಪೌರ ಕಾರ್ಮಿಕರ ಕೊರತೆ ಇದೆ ಇರುವ ಪೌರ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆ ಮನೆ ಮನೆ ಕಸ ಸಂಗ್ರಹಣೆ ಹಾಗೂ ನಗರ ಸುಂದರೀಕರಣ, ಚರಂಡಿ ಸ್ವಚ್ಛತೆ ಮಾಡಲಾಗ್ತುತಿದೆ ಎಂದು ವಿವರಣೆ ನೀಡುತ್ತಿದ್ದಾಗ ಏಕ ಏಕಿ ಮಹಿಳಾ ಸಿಬ್ಬಂದಿಗೆ ಏಕವಚನದಲ್ಲಿ ಬೈದು ನಿಂದಿಸಿ ಅವಮಾನಿಸುವುದರ ಜೊತೆಗೆ ನಿನ್ನನ್ನು ಇಲ್ಲಿಂದ ಓಡಿಸ್ತೇನೆ ಬೆದರಿಕೆ ಹಾಕಿರುವ ಬಗ್ಗೆ ತಿಳಿದು ಬಂದಿದೆ.

ರಾತ್ರಿ 8.30 ಆದರೂ ಮನೆಗೆ ಕೆಲವೊಂದು ಮಹಿಳಾ ಸಿಬ್ಬಂದಿಯ ಕುಟುಂಬಸ್ಥರು ಪುರಸಭೆಗೆ ಬಂದಾಗ ಸಭೆ ನಡೆಯುತ್ತಿರುವುದು ಕಂಡು ಬಂತು ರಾತ್ರಿ ಸಮಯದಲ್ಲಿ ಪುರಸಭೆ ಬಾಗಿಲು ತೆರೆದೇ ಇದೆ ಕಚೇರಿ ವಿದ್ಯುತ್ ದೀಪಗಳು ಉರಿಯುತ್ತಿರುವುದನ್ನು ಕಂಡು ಸಾರ್ವಜನಿಕರು, ಪತ್ರಕರ್ತರೊಬ್ಬರು ಕಚೇರಿಗೆ ಹೋದಾಗ ಕೂಡಲೇ ಸಭೆ ಮುಗಿಸಿ ತಮ್ಮ ತಮ್ಮ ಸರಕಾರಿ ವಾಹನಗಳಲ್ಲಿ ಹೊರಟುಹೋದರೆ ದೂರದ ಊರಿಗೆ ಹಳ್ಳಿಗಳಿಗೆ ಹೋಗಬೇಕಾಗಿದ್ದ ಸಿಬ್ಬಂದಿಗಳು ಬಸ್ಸುಗಳಿಲ್ಲದೆ ಪರದಾಡುತ್ತಿದ್ದರೆ ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ಮುಖ್ಯಧಿಕಾರಿ,ಯೋಜನಾ ನಿರ್ದೇಶಕರು ತಮ್ಮ ಸರ್ಕಾರಿ ವಾಹನಗಳಲ್ಲಿ ನಿಶ್ಚಿoತೆಯಾಗಿ ಮನೆ ಸೇರಿ ಪುರಸಭೆ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳು ಪರಿಸ್ಥಿತಿ ಕಂಡು ಸಾರ್ವಜನಿಕರು ವ್ಯವಸ್ಥೆ ಮಾಡಿ ಮನೆ ತಲುಪುವoತಾಯಿತು.

ಈ ಹಿಂದೆಯೂ ಹಲವಾರು ಬಾರಿ ಪುರಸಭಾ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳನ್ನು ಹಲವಾರು ಬಾರಿ ತಮ್ಮಕಛೇರಿಗೆ ಕರೆಸಿ ಬೈದು ನಿಂದಿಸುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಇವರ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹಗಳು ಸಿಬ್ಬಂದಿಗಳು ಹಾಗೂ ಅವರ ಕುಟುಂಬಸ್ಥರಿಂದ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *