ಉಡುಪಿ: ಅಂಚೆ ಇಲಾಖೆ ವತಿಯಿಂದ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂನ್ 8 ರಂದು ಮಧ್ಯಾಹ್ನ 3.30 ಕ್ಕೆ ತ್ರೈಮಾಸಿಕ ಅಂಚೆ ಅದಾಲತ್ ನಡೆಯಲಿದೆ.
ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂನ್ 5 ರ ಮೊದಲು ಅಧೀಕ್ಷಕರಿಗೆ ಕಳುಹಿಸಬಹುದು ಅಥವಾ ಅದಾಲತ್ ನಡೆಯುವ ದಿನದಂದು ಹಾಜರಿದ್ದು, ಸಮಕ್ಷಮ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.
