ಮಂಗಳೂರು: ‘ಲೋಕ ಗೆಂದಿನ ಗಾಂಧಿಯೆರ್ ‘ ದ್ವಿತೀಯ ಮುದ್ರಣದ ಕೃತಿ ಬಿಡುಗಡೆ

ಮಂಗಳೂರು:  ಅನುಭವದ, ಅಧ್ಯಯನದ ಮತ್ತು ಆವಿಷ್ಕಾರ ಮನೋಭಾವದ ಕಾರಣದಿಂದಾಗಿಯೇ ಗಾಂಧಿ ಅವರು ಸತ್ಯದ ಹುಡುಕಾಟವನ್ನು ನಿರಂತರವಾಗಿ ನಡೆಸಿದ್ದರು, ಈ ಕಾರಣಕ್ಕಾಗಿ ಗಾಂಧಿ ಎಲ್ಲಾ ಕಾಲದಲ್ಲೂ  ಆದರ್ಶವಾಗುತ್ತಾರೆ ಮತ್ತು ಅಗತ್ಯವಾಗುತ್ತಾರೆ ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿಯವರು ಅಭಿಪ್ರಾಯಪಟ್ಟರು.‌

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಜಂಟಿಯಾಗಿ ಬಾವುಟ ಗುಡ್ಡೆಯ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಎರಡನೇಯ ಮುದ್ರಣದ ಕೃತಿ ಬಿಡುಗಡೆ ಹಾಗೂ  ‘ಮಹಾತ್ಮರ ಮನನ’  ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 ಡಾ. ಉದಯ ಕುಮಾರ್ ಇರ್ವತ್ತೂರು ಅವರು ಬರೆದ `ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಪುನರ್ ಮುದ್ರಣದ ಕೃತಿಯನ್ನು ತುಳು ಅಕಾಡೆಮಿಯ ಅಧ್ಯಕ್ಷ  ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಬಿಡುಗಡೆಗೊಳಿಸಿದರು.

ಗಾಂಧಿ ಚಿಂತನಾ ಸಂವಾದ ಕಾರ್ಯಕ್ರಮವನ್ನು ಲೇಖಕ ಅರವಿಂದ ಚೊಕ್ಕಾಡಿಯವರು  ನಡೆಸಿಕೊಟ್ಟರು. ಪ್ರತಿಷ್ಠಾನದ ಉಪಾಧ್ಯಕ್ಷರಾದ  ಬಿ. ಪ್ರಭಾಕರ ಶ್ರೀಯಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್  ಉಪಸ್ಥಿತರಿದ್ದರು.

ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯಿಲ್ ಎನ್.  ಸ್ವಾಗತಿಸಿದರು. ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೇಮ್ ಕುಮಾರ್ ವಂದಿಸಿದರು.

Leave a Reply

Your email address will not be published. Required fields are marked *