ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಇತ್ತಿಚೆಗೆ ಜರುಗಿದ ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನದ ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭದಲ್ಲಿ ವಂದೇ ಮಾತರಂಗೀತೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಶೇಷ ಭಾಷಣ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು.







ಈ ಕಾರ್ಯಕ್ರಮಕ್ಕೆ ಮುಖ್ಯ ವಕ್ತಾರರಾಗಿ ಕಾರ್ಕಳದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ ಆಗಮಿಸಿದರು. ನಂತರ ಮಾತನಾಡಿದ ಒಂದು ಜಗತ್ತನ್ನು ಕಟ್ಟಿದ ಅಥವಾ ಒಂದು ಸಾಮ್ರಾಜ್ಯವವನ್ನು ನಾಶಗೊಳಿಸಿದ ಗೀತೆ ಎಂದರೆ ನೆನಪಾಗುವುದು ವಂದೇ ಮಾತರಂ. ಭಾರತದ ಧ್ವಜದಲ್ಲಿರುವ ಕೇಸರಿ ಬಿಳಿ ಹಸಿರು ಬಣ್ಣಗಳಲ್ಲಿ ನಾವು ಭಾರತ ಮಾತೆಯನ್ನು ಕಾಣುತ್ತೇವೆ. ಬಂಕಿಮ ಚಂದ್ರ ಚಟರ್ಜಿಯವರು ಇಡಿ ವಂದೇ ಮಾತರಂಗೀತೆಯಲ್ಲಿ ಭಾರತ ಮಾತೆಯನ್ನು ವರ್ಣಿಸಿದ್ದಾರೆ.
1905ರಲ್ಲಿ ಬಂಗಾಳದ ವಿಭಜನೆಗೆ ಬ್ರಿಟಿಷರ ಮುಂದಾದಾಗ ಅವರನ್ನು ವಿರೋಧಿಸಲು ಭಾರತೀಯರ ಕೈಗೆ ಸಿಕ್ಕ ಅಸ್ತ್ರವೆಂದರೆ ಈ ವಂದೇ ಮಾತ ರಂಗೀತೆ ಮನೆಮನೆಗಳಲ್ಲಿ ಈ ವಂದೇ ಮಾತರಂ ಗೀತೆ ಮೊಳಗುತ್ತಿತ್ತು.
ಇಂದು ವಂದೇ ಮಾತರಂ ಗೀತೆಯನ್ನು ಶಾಲಾ ಕಾಲೇಜುಗಳಲ್ಲಿ ಪೂರ್ತಿಯಾಗಿ ಹಾಡಬೇಕು ಎನ್ನುವ ನಿಯಮವು ಕೂಡಜಾರಿಯಾಗಿದೆ. ನಮ್ಮ ದೇಶದಲ್ಲಿ ಇಂಥ ಹಾಡುಗಳು ದೇಶ ಭಕ್ತಿಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ನೀಡುತ್ತಾ ಬಂದಿದೆ.
ವಂದೇ ಮಾತರಂ ಹಾಡನ್ನು ಹಾಡುವಾಗ ಭಾರತಕ್ಕಾಗಿ ಹೋರಾಡಿ ಗತಿಸಿ ಹೋದ ಲಕ್ಷಾಂತರ ಮಹಾನ್ ಚೇತನಗಳು ಕಣ್ಣ ಮುಂದೆ ಬರುತ್ತಾರೆ.
ನಮ್ಮ ಶಾಲಾ ಮಕ್ಕಳಿಗೆ ಈ ವಂದೇ ಮಾತರಂಗೀತೆಯ ಇತಿಹಾಸವನ್ನು ತಿಳಿಸಿ ಹೇಳಬೇಕು. ದೇಶದ ವಿಭಜನೆ ಮಾಡಬೇಕುಎನ್ನುವ ಮಾತು ಗಳು ನಮ್ಮ ಸುತ್ತ ಮುತ್ತ ಕೇಳುವಾಗ ದೇಶವನ್ನುಒಂದಾಗಿ ಇಟ್ಟುಕೊಳ್ಳಬೇಕಾದ್ರೆ ಅದಕ್ಕೆ ಈ ವಂದೇಮಾತರಂ ಅನ್ನೋದು ಒಂದು ರಣ ಮಂತ್ರವಾಗಬೇಕು.
ಸಮಾರೋಪ ಸಮಾರಂಭವನ್ನು ಉದ್ದೇಶಿಸಿ, ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್‍ಕಲ್ಲಡ್ಕ ಮಾತನಾಡಿ ಸಾಮಾಜಿಕ ಸಾಮರಸ್ಯವನ್ನು ತರಬೇಕಾದರೆ ನಾವು ಪ್ರೀತಿ ವಿಶ್ವಾಸ ನಂಬಿಕೆಗಳ ಆಧಾರದ ಮೇಲೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ, ಕೃಷಿ ಕ್ಷೇತ್ರದಲ್ಲಿ ಬಹಳ ಸಂಪದ್ಭರಿತ ದೇಶ ನಮ್ಮದು.
ನಾವೆಲ್ಲರೂ ಭಾರತೀಯತೆಯನ್ನು ಮೈಗೂಡಿಸಿಕೊಂಡು ನಮ್ಮ ಮೂಲ ಬೇರನ್ನು ಮರೆಯದೆರಾಷ್ಟ್ರ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಭಾರತೀಯ ಶಿಕ್ಷಣ ಪರಂಪರೆಯನ್ನು ಮಕ್ಕಳಿಗೆ ಕಲಿಸಬೇಕು. ಸನಾತನ ಧರ್ಮವನ್ನು ಪಾಲಿಸಬೇಕು. ನಾವು ಮಕ್ಕಳಿಗೆ ನಮ್ಮದೇಶದ ಐತಿಹಾಸಿಕ ಸಾಧನೆಗಳನ್ನು ತಿಳಿಸಬೇಕು. ಆ ಮೂಲಕ ದೇಶದ ಬಗ್ಗೆ ಹೆಮ್ಮೆಯ ಭಾವನೆಯನ್ನು ಮೂಢಿಸಬೇಕು ಮತ್ತು ಮಗು ಸಾಧನೆ ಮಾಡುವತ್ತ ಪ್ರಯತ್ನಿಸುತ್ತಾನೆ.
ಜಗತ್ತಲ್ಲಿ ಎಲ್ಲರನ್ನು ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಧರ್ಮ ಏನಾದ್ರು ಇದ್ದರೆ ಅದು ಹಿಂದೂ ಧರ್ಮ ಮಾತ್ರ. ಎಲ್ಲರಿಗೂ ಈ ಭಾರತ ಸರ್ವರಿಗೂ ತನ್ನೊಳಗೆ ಜೀವಿಸಲು ಅವಕಾಶವನ್ನು ಕೊಟ್ಟಿದೆ. ನಮ್ಮ ಸನಾತನ ಧರ್ಮದ ಬೇರುಗಳನ್ನು ಕತ್ತರಿಸಲು ನಮ್ಮ ವಿರೋಧಿಗಳು ಪ್ರಯತ್ನಿಸುತ್ತಲೆ ಇದ್ದಾರೆ. ಆದರೆ ನಾವು ಭಾರತೀಯರು ಎಂಬ ಭಾವನೆಯನ್ನು ಬೆಳೆಸಿಕೊಂಡು ನಮ್ಮ ಬೇರುಗಳನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬೇಕು. ಭಾರತದ ಮಣ್ಣಲ್ಲಿ ಜನಿಸಲು ಪುಣ್ಯ ಪಡೆದು ಬಂದಿರಬೇಕು. ಅಂತಹ ಶ್ರೇಷ್ಠ ದೇಶ ನಮ್ಮ ಭಾರತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಬಿಎಸ್‍ಇ ಮತ್ತು ರಾಜ್ಯ ಪಠ್ಯಕ್ರಮದಲ್ಲಿ ಓದಿ ಅತ್ಯುತ್ತಮ ಅಂಕ ಪಡೆದು ಶಾಲಾ ಮತ್ತು ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾಭಾರತಿ ಸಂಯೋಜಿತ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾರದ ಸಮೂಹ ಸಂಸ್ಥೆಗಳ ಕಾರ್ಯನಿರ್ವಹಾಣಾಧಿಕಾರಿ ಸಮಿರ್ ಪುರಾಣಿಕ್, ವಿದ್ಯಾಭಾರತಿ ಕರ್ನಾಟಕ ರಾಜ್ಯಉಪಾಧ್ಯಕ್ಷರಾದ ವಸಂತ್ ಮಾಧವ್, ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ.ಕೆ.ಸಿ.ನಾೈಕ್, ಜಿಲ್ಲಾ ಅದ್ಯಕ್ಷರಾದ ಲೋಕಯ್ಯ ಡಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ.,ಸಮಾರೋಪ ಸಮಾರಂಭದ ನಿರೂಪಣೆಯನ್ನು ಶಕ್ತಿ ಪಿಯು ಕಾಲೇಜಿನ ಅದ್ಯಾಪಕರಾದ ಸುನಿಲ್‍ರವರು ನಡೆಸಿಕೊಟ್ಟರು.
