ಕಾರ್ಕಳ: ಕಾರ್ಕಳ ಶಾಸಕರು ಮಾಜಿ ಸಚಿವರು ನಮ್ಮ ಜನಪ್ರಿಯ ಶಾಸಕರಾದ ವಿ ಸುನಿಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಕಾರ್ಕಳ ಕಾಂಗ್ರೆಸ್ಸಿಗರೆ ನಿಮಗೆ ಸ್ವಲ್ಪ ಅದರೂ ನೈತಿಕತೆ ಇದೆಯೇ ? ಎಂದು ಬಿಜೆಪಿ ಕಾರ್ಕಳ ಅಧ್ಯಕ್ಷರು ಪ್ರಶ್ನೆ ಮಾಡಿದ್ದಾರೆ.

ನಿಮ್ಮದೇ ಕಾಂಗ್ರೆಸ್ ಪಕ್ಷದ ಪುತ್ತೂರಿನ ಶಾಸಕರಾದ ಅಶೋಕ್ ರೈ ರವರು 7% ಕಮಿಷನ್ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರವಾಗಿ ಪತ್ರ ಬರೆದಿರುವುದು ನಿಮ್ಮ ಗಮನಕ್ಕಿಲ್ಲವೇ ? ಎಂದು ವ್ಯಂಗ್ಯ ಮಾಡಿದ್ದಾರೆ
ಭ್ರಷ್ಟ ವ್ಯವಸ್ತೆಯಲ್ಲಿದ್ದುಕೊಂಡು ಅದನ್ನು ಮರೆಮಾಚಲು ನೀವು ಮಾಡುತ್ತಿರುವ ನಾಟಕ ಕಾರ್ಕಳ ಜನತೆಗೆ ಈಗಾಗಲೇ ಗೊತ್ತಾಗಿದೆ.
ಮಾನ್ಯ ಸುನಿಲ್ ಕುಮಾರ್ ವರ್ಚಸ್ಸನ್ನು ಕಡಿಮೆ ಮಾಡಲು ಹುನ್ನಾರ ಎಂದು ಗುಡುಗಿದ್ದಾರೆ.
ಇದನ್ನೆಲ್ಲಾ ಮರೆ ಮಾಡಲು ಯಾವುದೇ ರೀತಿಯ ಭ್ರಷ್ಟಾಚಾರ ಆರೋಪ ಇಲ್ಲದ ನಮ್ಮ ಶಾಸಕರ ವಿರುದ್ಧ ನೀವು ಈ ತರಹದ ಸುಳ್ಳು ಆರೋಪ ಮಾಡುವುದರಿಂದ ನಮ್ಮ ಶಾಸಕರ ಕಾರ್ಯ ವೈಖರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರ್ಕಳದ ಪ್ರಜ್ಞಾವಂತ ಜನರು ನಿಮ್ಮ ನಾಟಕವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ.
ನಿನ್ನೆ ಕಾಂಗ್ರೆಸ್ಸಿನ ಸ್ಟಿಕ್ಕರ್ ಅಭಿಯಾನದಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿಯವರನ್ನು ಸ್ವಪಕ್ಷದವರೇ ಹೊರಗಿಟ್ಟರೆ ? ಎಂದು ಪ್ರಶ್ನೆ ಮಾಡಿದ್ದಾರೆ.
