ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026 ಕ್ಕೆ ಚಾಲನೆ

ಬೆಂಗಳೂರು: ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ವತಿಯಿಂದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026” ಅನ್ನು ಆಯೋಜಿಸಲಾಗಿದೆ.

“ವೈದ್ಯಲೋಕ” ಆರೋಗ್ಯ ಮಾಸ ಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳು ಈ ಸ್ಪರ್ಧೆಗೆ ಸಹಯೋಗ ನೀಡುತ್ತಿವೆ.

ಸ್ಪರ್ಧೆಯ ಉದ್ದೇಶ:
ಬರವಣಿಗೆಯ ಮೂಲಕ ಆರೋಗ್ಯ ಮತ್ತು ಸ್ವಾಸ್ಥ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಧ್ವನಿಯಾಗುವುದು. ನಿಮ್ಮ ಪದಗಳು ಆರೋಗ್ಯಕರ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂಬುದು ಪರಿಷತ್ತಿನ ಆಶಯ.

3 ವಿಭಾಗಗಳಲ್ಲಿ ಸ್ಪರ್ಧೆ:

  1. ಸಾರ್ವಜನಿಕರು
  2. ವೈದ್ಯರು ಮತ್ತು ಆರೋಗ್ಯ ವೃತ್ತಿಪರರು
  3. ವೈದ್ಯಕೀಯ ವಿದ್ಯಾರ್ಥಿಗಳು

ಏಕೆ ಭಾಗವಹಿಸಬೇಕು?

  • ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಸುವರ್ಣ ಅವಕಾಶ
  • ಸಾಹಿತ್ಯದ ಮೂಲಕ ಆರೋಗ್ಯ ಜಾಗೃತಿ ಹರಡಲು ವೇದಿಕೆ
  • ಆಯ್ದ ಬರಹಗಳು ‘ವೈದ್ಯಲೋಕ’ ಮಾಸಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟ
  • ಆರೋಗ್ಯ ವಿಷಯ ಲೇಖಕರಾಗಿ ಗುರುತಿಸಿಕೊಳ್ಳುವ ಅವಕಾಶ
  • ವಿಜೇತರಿಗೆ ಪ್ರಶಸ್ತಿ, ಬಹುಮಾನ ಮತ್ತು ಪ್ರಮಾಣಪತ್ರ

Leave a Reply

Your email address will not be published. Required fields are marked *