ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಛೇರಿಯಲ್ಲಿ ಅಕಾಡೆಮಿಯು ಹಮ್ಮಿಕೊಂಡ ಕೊಂಕಣಿ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ವಿಜೇತ ರೋಶನ್ ಮೆಲ್ಕಿ ಸಿಕ್ವೇರಾ (ರೋಶು, ಬಜ್ಪೆ)ಯವರು ಬರೆದ “ಹೊ ಮ್ಹಜೊ ಅಪ್ರಾಧ್” (ಪ್ರಥಮ ಬಹುಮಾನ), ವಿನ್ಸೆಂಟ್ ಪಿಂಟೊ (ವಿನ್ಸಿ ಪಿಂಟೊ, ಆಂಜೆಲೊರ್) ಇವರು ಬರೆದ “ಕುದ್ರ್ಯಾಚೊ ರಾಕ್ವಲಿ” (ದ್ವಿತೀಯ ಬಹುಮಾನ) ಹಾಗೂ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಅವರು ಬರೆದ “ಆನಿ ಸಾಂಜ್ ಜಾಲಿ” (ತೃತೀಯ ಬಹುಮಾನ) ಪುಸ್ತಕಗಳನ್ನು ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಲೋಕಾರ್ಪಣೆ ಗೈದರು.

ಅಕಾಡೆಮಿ ರಿಜಿಸ್ಟ್ರಾರ್ರಾದ ರಾಜೇಶ್ ಜಿ, ಸ್ಥಾಯಿ ಸಮಿತಿ ಸದಸ್ಯರಾದ ನವೀನ್ ಲೋಬೊ, ದಯಾನಂದ ಮಡ್ಕೇಕರ್, ಸಮರ್ಥ್ ಭಟ್ ಹಾಗೂ ರೊನಾಲ್ಡ್ ಕ್ರಾಸ್ತಾರವರು ಉಪಸ್ಥಿತರಿದ್ದರು.
