ಮಂಗಳೂರು: ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ, ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನದ ಆಯೋಜಕತ್ವದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ವರುಣನ ಕೃಪೆಗಾಗಿ ಜುಲೈ, 16 ಗುರುವಾರದಂದು ಬೆಳಿಗ್ಗೆ 6 ರಿಂದ 7ರ ವರೆಗೆ ಕದ್ರಿ ದೇವಳದ ಕೆರೆಯ ಪ್ರಾಂಗಣದಲ್ಲಿ ಪರ್ಜನ್ಯ ಜಪ ಪಾರಾಯಣ ಜರಗಲಿದೆ.

ಸಮಸ್ತ ಬ್ರಾಹ್ಮಣ ಸಮಾಜದ ಬಂಧುಗಳು ಅನುಷ್ಠಾನದೊಂದಿಗೆ ಸಾಂಪ್ರದಾಯಿಕ ಉಡುಗೆ ಧರಿಸಿ ಪಾಲ್ಗೊಳ್ಳಲಿದ್ದು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ಎ.ಜೆ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು, ಕಾರ್ಯನಿರ್ವಹಣಾಧಿಕಾರಿಗಳು ಸಹಕಾರ ನೀಡಲಿದ್ದು, ಕದ್ರಿ ದೇವಸ್ಥಾನದ ತಂತ್ರಿಗಳಾದ ವೇ|ಮೂ| ಶ್ರೀ ವಿಠಲದಾಸ ತಂತ್ರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಅರ್ಚಕರಾದ ಅಡಿಗ ಬಂಧುಗಳು ಸಹಕರಿಸಲಿದ್ದಾರೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಮುಂಜಾನೆ 5-50 ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡು, ಗುರು ವಂದನೆ, ಗಣಪತಿ ಪ್ರಾರ್ಥನೆ, ಸರಸ್ವತಿ ಪ್ರಾರ್ಥನೆ, ಅಥರ್ವ ಶೀರ್ಷ, ಪರ್ಜನ್ಯ ಜಪ, ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ, ಐಕ್ಯ ಮಂತ್ರಗಳೊಂದಿಗೆ ಪ್ರಾರ್ಥನೆ ಸಲ್ಲಿಸಲಾಗುವುದು.
ವಿಪ್ರ ಬಂಧುಗಳೆಲ್ಲರೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದಾಗಿದೆ
ಡಾ. ಸತ್ಯ ಕೃಷ್ಣ ಭಟ್ – 9845083573 ಡಾ. ರಾಜೇಂದ್ರ ಪ್ರಸಾದ್ – 09448465667, ರಘುರಾಮ – 7760054238, ರಾಮಚಂದ್ರ ಭಟ್ ಎಲ್ಲೂರು – 9448870661, ಸುಧಾಕರ ರಾವ್ ಪೇಜಾವರ – 9448546051, ಶ್ರೀಧರ ಹೊಳ್ಳ – 9844401834 , ಉದಯ ಕುಮಾರ್ – 09480328030 ಗುರುರಾಜ ಎಮ್ ಎಸ್ 9845032598 ಶ್ರೀರಂಗ ಐತಾಳ – 9945124156, ರಾಮಕೃಷ್ಣ ರಾವ್ ಕದ್ರಿ – 9448128795 ಕೃಷ್ಣ ಭಟ್ ಕದ್ರಿ — 9448253604 ಗುರುಪ್ರಸಾದ ಕಡಂಬಾರು – 9380999424 ಗಣೇಶ ಹೆಬ್ಬಾರ್ – 8722325333 ಅಥವಾ ಎಸ್. ಪ್ರದೀಪ ಕುಮಾರ ಕಲ್ಕೂರ – 9845083736.
