ಮುಂಬಯಿ: ಬಂಟರ ಸಂಘದ ಬೋರಿವಲಿ ಶಿಕ್ಷಣ ಸಮಿತಿಯ ಅಧೀನದ ಬೋರಿವಿಲಿ ಶಿಕ್ಷಣ ಸಮಿತಿಯ ಬೊರಿವಲಿ ಐ.ಸಿ ಕಾಲೋನಿಯಲ್ಲಿನ ಬಂಟ್ಸ್ ಸಂಘ’ಸ್ ಶಶಿಕಿರಣ್ ಶೆಟ್ಟಿ ಎಜ್ಯುಕೇಶನ್ ಇನ್ಸ್ಟ್ಟಿಟ್ಯೂಶನ್ಸ್ ಶಿಕ್ಷಣ ಸಂಕೀರ್ಣದಲ್ಲಿ `ಬಂಟ್ಸ್ ಸಂಘ’ಸ್ ಲೀಲಾವತಿ ಹೆಗ್ಡೆ ಶಾಲೆ’ (ಬಿಎಸ್ಎಲ್ಎಚ್ಎ ಸ್) ವಿದ್ಯಾಲಯದಲ್ಲಿ 2026ನೇ ಸಾಲಿನ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಕಾರ್ಯಕ್ರಮವು ಅತ್ಯಂತ ಸಂಭ್ರಮ ಹಾಗೂ ಶಿಸ್ತುಬದ್ಧವಾಗಿ ನೇರವೇರಿತು. ಈ ಸಂದರ್ಭದಲ್ಲಿ ಪ್ರಧಾನ ಬಾಲಕ ನಾಯಕ, ಪ್ರಧಾನ ಬಾಲಕಿ ನಾಯಕಿ, ಸದನ ನಾಯಕರು (ಹೆಡ್ ಬಾಯ್, ಹೆಡ್ ಗರ್ಲ್, ಹೌಸ್ ಕ್ಯಾಪ್ಟನ್ಸ್) ಮತ್ತು ವಿದ್ಯಾರ್ಥಿ ಪರಿಷತ್ ಸದಸ್ಯರು ಅಧಿಕೃತವಾಗಿ ಪದಗ್ರಹಣ ನಡೆಸಲಾಗಿದ್ದು ನಾಯಕತ್ವದ ಜವಾಬ್ದಾರಿಯನ್ನು ಸ್ವೀಕರಿಸಿದರು.






ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಜವಾಬ್ದಾರಿಯುತ ನಾಯಕತ್ವ, ಉಜ್ವಲ ಭವಿಷ್ಯದ ಮುನ್ನಡೆಗೆ ವಿದ್ಯಾಲಯಗಳೇ ಪ್ರಧಾನನವಾದುದು. ಈ ಕಾಲಾವಧಿಯಲ್ಲಿನ ರೂಢಿಸಿಕೊಂಡ ಸಮರ್ಥ ನಾಯಕತ್ವವು ನಿಮ್ಮ ಸ್ವಜೀವನ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಬಲ್ಲದು ಎಂದರು.
ಮುಖ್ಯ ಅತಿಥಿಯಾಗಿ ಕಚ್ಚಾತೈಲ ಸಾಗಾಣಿಕೆ ಕ್ಷೇತ್ರದ ಮೆರೈನ್ ಕ್ಯಾಪ್ಟನ್ ಸಂತೋಷ್ ಶೆಟ್ಟಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾದಾಯಕ ಸಂದೇಶ ನೀಡಿ ಇಂದಿನ ನಾಯಕರು ನಾಳಿನ ರಾಷ್ಟ್ರ ನಿರ್ಮಾಪಕರು ಆಗಿದ್ದಾರೆ. ವಿದ್ಯಾಥಿ ಜೀವನದ ಶಿಸ್ತು ಮತ್ತು ಸೇವಾ ಮನೋಭಾವವೇ ಯಶಸ್ವಿ ನಾಯಕತ್ವದ ಅಡಿಪಾಯವಾಗುವುದು. ಆದ್ದರಿಂದ ಮಕ್ಕಳು ವಿದ್ಯಾಥಿ ಬದುಕನ್ನು ಅರ್ಥಪೂರ್ಣವಾಗಿ ಅನುಭವಿಸಿ ಭವ್ಯ ಬದುಕನ್ನು ರೂಪಿಸಿಕೊಳ್ಳಿರಿ ಎಂದ ಸಲಹಿಸಿದರು.
ಈ ಸಂದರ್ಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಎಸ್.ಶೆಟ್ಟಿ, ಬೋರಿವಲಿ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಹೆಗ್ಡೆ ನಡಿಬೆಟ್ಟು, ಕಾರ್ಯದರ್ಶಿ ಸಿಎ| ಜಗದೀಶ್ ಬಿ.ಶೆಟ್ಟಿ, ಕೋಶಾಧಿಕಾರಿ ಸಿಎ| ಆದಿತ್ಯ ಶೆಟ್ಟಿ, ಸಹ ಸಂಯೋಜಕ ಅಶೋಕ್ ಶೆಟ್ಟಿ, ಧನ ಸಂಗ್ರಹಣಾ ಸಮಿತಿ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಡಾ| ಪಿ.ವಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ಡಾ| ಸತೀಶ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾರ್ನಾಡ್, ಡಾ| ಹರಿಣಿ ಚೌಟ, ಶಾಲೆಯ ಪ್ರಾಂಶುಪಾಲೆ ಕವಿತಾ ಜಿ.ಹೆಗ್ಡೆ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ನಾಯಕತ್ವ, ಜವಾಬ್ದಾರಿ ಮತ್ತು ಸಮಾಜಸೇವೆಯ ಮಹತ್ವವನ್ನು ತಿಳಿಸಿದರು.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಸಾರುವ ವಿಶೇಷ ನೃತ್ಯ ಪ್ರದರ್ಶನ ನೀಡಿದ್ದು, ಕಾರ್ಯಕ್ರಮಕ್ಕೆ ರಾಷ್ಟ್ರಭಕ್ತಿಯ ಕಳೆ ತುಂಬಿತು. ತಮ್ಮ ಮಕ್ಕಳು ಜವಾಬ್ದಾರಿಯುತ ನಾಯಕತ್ವದತ್ತ ಮೊದಲ ಹೆಜ್ಜೆಯಿಡುವ ಈ ಮಹತ್ವದ ಕ್ಷಣವನ್ನು ಹೆಮ್ಮೆಯಿಂದ ವೀಕ್ಷಿಸಿದ ಪೋಷಕರ ಉಪಸ್ಥಿತಿಯಿಂದ ಕಾರ್ಯಕ್ರಮ ಮತ್ತಷ್ಟು ಅರ್ಥಪೂರ್ಣ ಹಾಗೂ ಸ್ಮರಣೀಯವಾಯಿತು.
ನಿತ್ಯಾನಂದ ಹೆಗ್ಡೆ ನಡಿಬೆಟ್ಟು ಸ್ವಾಗತಿಸಿ ಪ್ರಸ್ತಾವನೆಗೈದರು. ಸದನ ನಾಯಕರು ಕ್ರಮವಾಗಿ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಜಿ.ಹೆಗ್ಡೆ ಧನ್ಯವದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಗೊಂಡಿತು.
