ಹಿರ್ಗಾನ: ಎಣ್ಣೆಹೊಳೆ ಸ್ವರ್ಣ ನದಿಗೆ ಈಜಲು ತೆರಳಿದ್ದ ಮೂಜೂರು ಗ್ರಾಮದ 5 ಮಂದಿ ಯುವಕರಲ್ಲಿ ಎರಡು ಮಂದಿ ನೀರು ಪಾಲಾದ ಘಟನೆ ನಡೆದಿದೆ.

ಡ್ರೋನ್ ಕ್ಯಾಮೆರಾದ ಮೂಲಕ ಮೃತ ದೇಹವನ್ನು ಪತ್ತೆ ಹಚ್ಚಲಾಗಿದ್ದು ಮೃತಪಟ್ಟವರನ್ನು ಹರ್ಷನ್ ಆಚಾರ್ಯ (22) ಮತ್ತು ಭರತ್ ಪೂಜಾರಿ (30) ಎಂದು ಗುರುತಿಸಲಾಗಿದೆ.
ಮೃತ ದೇಹ ಪತ್ತೆಗಾಗಿ ಅಗ್ನಿ ಶಾಮಕ ಹಾಗೂ ಪೊಲೀಸ್ ಇಲಾಖೆ ಅವರು ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಸಿಗದ ವೇಳೆ ಡ್ರೋನ್ ನ ಮೂಲಕ ಮೃತ ದೇಹ ಪತ್ತೆ ಹಚ್ಚಿ ಈಜು ತಜ್ಞರ ಸಹಾಯದಿಂದ ಮೃತದೇಹವನ್ನು ಮೇಲೆತ್ತಲಾಗಿದೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
