ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಪ್ರಿಯಾಂಜಲಿ ರಾವ್ ಪರ್ಫಾರ್‌ಮನ್ಸ್

ಮುಂಬಯಿ, ಆ. 03: ಬೊಂಬೇ ಸೌತ್ ಕೆನರ ಬ್ರಾಹ್ಮಣ್ಸ್ ಅಸೋಸಿಯೇಶನ್ (ಬಿಎಸ್‍ಕೆಬಿ) ಸದಸ್ಯೆ ಹಾಗೂ ಮುಂಬಯಿಯನ ಚಿಣ್ಣರ ಬಿಂಬದ ಮಾಜಿ ವಿದ್ಯಾರ್ಥಿನಿ, ಅಂತರಾಷ್ಟ್ರೀಯ ಪ್ರಸಿದ್ಧ ಭರತನಾಟ್ಯ ಕಲಾವಿದೆ ಹಾಗೂ ನೃತ್ಯ ಪ್ರದರ್ಶಕಿ ಪ್ರಿಯಾಂಜಲಿ ರಾವ್ ಅವರು ತನ್ನ ನೃತ್ಯಯಾನದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ. ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಪ್ರಿಯಾಂಜಲಿ ರಾವ್ ಪರ್ಫಾರ್‌ಮನ್ಸ್ ಗೈದು ರಾಷ್ಟ್ರದ ಹಿರಿಮೆಗೆ ಪಾತ್ರರಾಗಿದ್ದಾರೆ.

ಆಡಿಷನ್ ಮೂಲಕ ಆಯ್ಕೆಯಾದ ಪ್ರಿಯಾಂಜಲಿ, ಕಳೆದ ಭಾನುವಾರ (ಆ.02) ಸ್ಕಾಟ್‍ಲ್ಯಾಂಡ್‍ನ ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ (2030ರ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದಲ್ಲಿನ ಅಹಮದಾಬಾದ್‍ಗೆ ಅಧಿಕೃತವಾಗಿ ಹಸ್ತಾಂತರಿಸುವ ಸಮಾರಂಭ) ಹಸ್ತಾಂತರ ಸಮಾರಂಭದಲ್ಲಿ ಭಾರತ ರಾಷ್ಟ್ರದ ಭರತನಾಟ್ಯ ಕಲಾವಿದೆಯಾಗಿ ಅಭಿನಯಿಸಿ ನೃತ್ಯ ಪ್ರದರ್ಶನ ನೀಡಿದರು.

ಈ ಭವ್ಯ ನೃತ್ಯ ಪ್ರದರ್ಶನದಲ್ಲಿ ಭರತನಾಟ್ಯ, ಕಥಕ್, ಭಾಂಗ್ರಾ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳ 100ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಸಂಗೀತ, ಸಿತಾರ್ ವಾದಕ ರಿಷಭ್ ರಿಖಿರಾಮ್ ಶರ್ಮಾ ಅವರ ವಾದನ, ಪ್ರಸಿದ್ಧ ನೃತ್ಯ ನಿರ್ದೇಶಕ ಶಿಯಾಮಕ್ ದಾವರ್ ಅವರ ನೃತ್ಯ ಸಂಯೋಜನೆ ಹಾಗೂ ನಟಿ, ರೂಪದರ್ಶಿ ಮಾನುಷಿ ಛಿಲ್ಲರ್ ಪ್ರಮುಖ ನೃತ್ಯಗಾರ್ತಿಯಾಗಿ ಕಾರ್ಯಕ್ರಮಕ್ಕೆ ಮೆರುಗು ತಂದರು. ದಕ್ಷಿಣ ಕನ್ನಡದ ಮತ್ತೋರ್ವ ಪ್ರತಿಭಾವಂತ ಕಲಾವಿದೆ, ಕನ್ನಡ ಧಾರಾವಾಹಿ ಮತ್ತು ಚಲನಚಿತ್ರ ನಟಿ ತನ್ವಿ ರಾವ್ ಕೂಡಾ ಈ ತಂಡದ ಸದಸ್ಯೆಯಾಗಿದ್ದರು.

ಪ್ರಿಯಾಂಜಲಿ ರಾವ್:
ಮಹಾನಗರದಲ್ಲಿನ ಅಪ್ರತಿಮ ಕಲಾವಿದೆ, ನೃತ್ಯ ಕಲಾ ವಸುಧರೆ ಪ್ರಿಯಂಜಲಿ ರಾವ್, ಖಾರ್ ಪಶ್ಚಿಮದ ನಿವಾಸಿ ವಿದ್ಯಾ ಆರ್.ರಾವ್ ದಂಪತಿ ಸುಪುತ್ರಿ ಮತ್ತು ಪ್ರತಿಷ್ಠಿತ ಎ.ಭುಜಂಗ ರಾವ್ ಮತ್ತು ತಾರಾ ಬಿ.ರಾವ್ ಅವರ ಮೊಮ್ಮಗಳಾಗಿದ್ದಾರೆ. ಈಕೆ ರೇವತಿ ಶ್ರೀನಿವಾಸ್ ರಾಘವನ್ ಅವರ ಶಿಷ್ಯೆ ಆಗಿ ಭರತನಾಟ್ಯದ ಒಲವು ಮೂಡಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ನೃತ್ಯಕಲೆಯ ತವರೂರಾದ ತಂಜಾವೂರು ಇಲ್ಲಿನ ಭಕ್ತಿಪೂರ್ವಕ ಕಲೆಯನ್ನು ಆರಾಧಿಸಿ ಭರತನಾಟ್ಯ ನೃತ್ಯವನ್ನು ಮೈಗೂಡಿಸಿಕೊಂಡ ಪ್ರಿಯಂಜಲಿ ನೂರಾರು ನೃತ್ಯ ಪ್ರದರ್ಶನ ನೀಡಿ ಹೆಗ್ಗಳಿಕೆಗೆ ಪಾತ್ರರಾದ ಅಪ್ರತಿಮ ಕಲಾವಿದೆ.

ಕಿರಿಯ ವಯಸ್ಸಿನಲ್ಲಿಯೇ ನೃತ್ಯ ಕಲೆಯಲ್ಲಿ ಆಸಕ್ತಿ ಬೆಳೆಸಿದ್ದ ಪ್ರಿಯಂಜಲಿ ಶಾಲೆ ದಿನಗಳಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿಭಾಹ್ವಾನಿತ ಬೆಡಗಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಭರತನಾಟ್ಯ ಅಭ್ಯಾಸ ನಿರತರಾಗಿರುವ ಪ್ರಿಯಂಜಲಿ ಹಲವು ಪುರಸ್ಕಾರಗಳಿಂದ ಗೌರವಿಸಲ್ಪಟ್ಟು ಜನಮನ್ನಣೆ ಪಡೆದ ಕಲಾವಿದೆಯಾಗಿ ಮೆರೆದಿದ್ದಾರೆ. ತನ್ನ ಶಾಲಾ ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಗರದ ಅನೇಕಾನೇಕ ಕಾರ್ಯಕ್ರಮಗಳಲ್ಲಿ ನೀಡಿದ ನೃತ್ಯ ಪ್ರದರ್ಶನಗಳೇ ಇವರ ಸಾಧನೆಗೆ ಸಾಕ್ಷಿಯಾಗಿವೆ.

ಪ್ರಿಯಾಂಜಲಿ ದೇಶ-ವಿದೇಶಗಳಲ್ಲಿ ಅನೇಕ ಏಕವ್ಯಕ್ತಿ ಹಾಗೂ ಸಮೂಹ ಭರತನಾಟ್ಯ ಪ್ರದರ್ಶನಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2017ರಲ್ಲಿ ರಾಷ್ಟ್ರಪತಿ ಭವನ, ನವದೆಹಲಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಂದಿನ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರ ಸಮ್ಮುಖದಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

Leave a Reply

Your email address will not be published. Required fields are marked *