ಮಂಗಳೂರು: ಹಿಂದಿನ ಕಷ್ಟಕಾಲದಲ್ಲಿ ಪ್ರಕೃತಿಯ ಆಹಾರಗಳನ್ನು ಮದ್ದಾಗಿ ತೆಗೆದುಕೊಳ್ಳುತ್ತಿದ್ದರು. ಈಗಿನ ಯಾoತ್ರಿಕ ಯುಗದಲ್ಲಿ ಅದನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದು ಮಂಗಳೂರಿನ ಹಿರಿಯ ವಕೀಲ ಅರುಣ್ ಬಂಗೇರ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನಾರಾಯಣ ಗುರು ಯುವ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ಕೊಡಿಯಾಲಬೈಲ್ ಸಹಕಾರಿ ನೌಕರರ ಸಹಕಾರ ಸಂಘದ ಸಪ್ತವರ್ಣ ಸಭಾಂಗಣದಲ್ಲಿ ಜರುಗಿದ ಮರಿಯಲದ ಮಿನದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಅಗರಿಯ ಪ್ರಗತಿಪರ ಕೃಷಿಕ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ನೀಲಯ ಯಂ. ಅಗರಿ ‘ತುಳು ಬದ್ಕ್ ದ ಪೊರ್ಲು ತಿರ್ಲ್’ ಎಂಬ ಉಪನ್ಯಾಸ ನೀಡಿದರು. ಆಪ್ತ ಸಮಾಲೋಚಕ ಸ್ಮಿತೇಶ್ ಎಸ್. ಬಾರ್ಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದ ಬಗ್ಗೆ ಸಲಹೆ ಸೂಚನೆ ನೀಡಿದರು.
ವೇದಿಕೆಯಲ್ಲಿ ನವೀನ್ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಗೀತಗಾರ ಹರಿದಾಸ ತೋನ್ಸೆ ಪುಷ್ಕಳಕುಮಾರ್ ‘ಕೋಟಿಚೆನ್ನಯ ಪದರಂಗಿತ’ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ‘ಸಬಿ ಸವಾಲ್’ ನಡೆಯಿತು. ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ, ವೇದಿಕೆಯ ಸಲಹಾ ನಿರ್ದೇಶಕರಾದ ಪ್ರೊ. ಎಂ. ಶಶಿಧರ ಕೋಟ್ಯಾನ್, ಸುಧಾಕರ ಕರ್ಕೇರ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ದೇವದಾಸ ಆಯೆರೆಮಾರ್ ಸ್ವಾಗತಿಸಿ ಪ್ರಸ್ತಾವಿಸಿದರು. ಮಾಜಿ ಅಧ್ಯಕ್ಷ ಬೃಜೇಶ್ ಅಂಚನ್ ಕೃತಜ್ಞತೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಸುಮಂತ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.
