ಶಕ್ತಿ ನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ನಡೆಯಲಿರುವ ಕೃಷ್ಣಮಯ-2026ರ ಪೋಸ್ಟರ್ ಬಿಡುಗಡೆ

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಯಿಯಲ್ ಶಾಲೆಯಲ್ಲಿ ಆಗಸ್ಟ್ 29 ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಮತ್ತು ಶಕ್ತಿ ಪ.ಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಕೃಷ್ಟಮಯ– 2026 ರ ಪೋಸ್ಟರ್ ನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೈಕ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್‍ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್‍ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕರಾದ ಸುಶ್ಮಾ ಸತಿಶ್‍ ರವರು ಉಪಸ್ಥಿತರಿದ್ದರು.

ಸ್ಪರ್ಧೆಗಳ ವಿವರ ಈ ಕೆಳಗಿನಂತಿದೆ.

ಬಾಲ ಮುಕುಂದ ವಿಭಾಗದಲ್ಲಿ0-3 ವರ್ಷ ತನಕದ ಮಕ್ಕಳಿಗೆ ಬೆಣ್ಣೆ ಕೃಷ್ಣ, 3 ರಿಂದ 6 ವರ್ಷ ತನಕದ ಮಕ್ಕಳಿಗೆ ಬಾಲಕೃಷ್ಣ, 3 ರಿಂದ 6 ವರ್ಷ ತನಕದ ಮಕ್ಕಳಿಗೆ ಗೀತಾ ಕಂಠಪಾಠ(ಧ್ಯಾನ ಶ್ಲೋಕ) ನಡೆಯಲಿದೆ. ನಂದಕಿಶೋರ ವಿಭಾಗದಲ್ಲಿ 1 ರಿಂದ 5ನೇ ತರಗತಿಯ ಮಕ್ಕಳಿಗೆ ಯಶೋದ ಕೃಷ್ಣ, 1 ನೇ ಮತ್ತು 2ನೇ ತರಗತಿಯ ಮಕ್ಕಳಿಗೆ ಗೀತಾ ಕಂಠಪಾಠ(ಧ್ಯಾನ ಶ್ಲೋಕ), 3 ರಿಂದ 5ನೇ ತರಗತಿಯ ಮಕ್ಕಳಿಗೆ ಗೀತಾ ಕಂಠಪಾಠ(ಧ್ಯಾನ ಶ್ಲೋಕ) ನಡೆಯಲಿದೆ. ಆನಂದ ಗೋಕುಲ ಫೋಟೋ ಸ್ಪರ್ಧೆಯಲ್ಲಿ ಮುದ್ದು ಕೃಷ್ಣ, ಬಾಲಾಕೃಷ್ಣ, ಮುರಳಿ ಕೃಷ್ಣ, ಯಶೋದ ಕೃಷ್ಣ, ವಾಸುದೇವ ಕೃಷ್ಣ ಸ್ಪರ್ಧೆ ನಡೆಯಲಿದೆ. ಗೋಪಾಲ ಕೃಷ್ಣ ವಿಭಾಗದಲ್ಲಿ 6ನೇ ತರಗತಿಯಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಗೀತಾ ಕಂಠಪಾಠ ಸ್ಪರ್ಧೆಅಧ್ಯಾಯ– 12(1-10ನೇ ಶ್ಲೋಕ) ಹಾಗೂ ದಾಸರಕೀರ್ತನಾ ಸ್ಪರ್ಧೆ ನಡೆಯಲಿದೆ. ಜಗನ್ಮೋಹನ ವಿಭಾಗದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರೆ ಶಾಸ್ತ್ರೀಯ ನೃತ್ಯ , ಗೀತಾ ಕಂಠಪಾಠ ಅಧ್ಯಾಯ– 15, 1-10ನೇ ಶ್ಲೋಕ, ಚಿತ್ರಕಲಾ ಸ್ಪರ್ಧೆ 8 ರಿಂದ 10ನೇ ತರಗತಿಯ ಮಕ್ಕಳಿಗೆ, 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕುಣಿತ ಭಜನೆ(ಶ್ರೀ ಕೃಷ್ಣ ಭಜನೆ)ಗೆ ಅವಕಾಶ ನೀಡಲಾಗಿದೆ. ಒಂದು ಶಾಲೆಯಿಂದ ಎಷ್ಟು ತಂಡಗಳಿಗೂ ಭಾಗವಹಿಸುವ ಅವಕಾಶವಿದೆ. ವೆಬ್‍ಸೈಟ್ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೋಸ್ಕರ ವೆಬ್ ಸೈಟ್ shakthi.edu.in, email: schooloffice@shakthi.edu.in ಮತ್ತು ದೂರವಾಣಿ ಸಂಖ್ಯೆ 7349244086/9686000046 ಗೆ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *