ಮೂಡುಬಿದಿರೆ: ಬೆಂಗಳೂರಿನ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ(ರಿ.)ಯ ವತಿಯಿಂದ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‍ನ ಕ್ರೀಡಾಪಟುಗಳಿಗೆ 15 ಚಿನ್ನ, 08 ಬೆಳ್ಳಿ, 10 ಕಂಚು ಒಟ್ಟು 33 ಪದಕಗಳು ಹಾಗೂ 04 ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ.

ನೂತನ ಕೂಟ ದಾಖಲೆಗಳು: 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಸುಭಾಷ್ (ಟ್ರಯಥ್ಲಾನ್ ಸಿ)ನಲ್ಲಿ, 18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಸಾಹಿಲ್ (100ಮೀ)ನಲ್ಲಿ, 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ರಾಜು (60ಮೀ)ನಲ್ಲಿ ಹಾಗೂ 18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬಾನವಿ (400ಮೀ)ನಲ್ಲಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಫಲಿತಾಂಶ :
14 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಸುಭಾಷ್ – ಟ್ರಯಥ್ಲಾನ್ ಸಿ (ಪ್ರಥಮ), ಮೋಕ್ಷಿತ್ ಆರ್ ಗೌಡ – ಟ್ರಯಥ್ಲಾನ್-ಬಿ (ದ್ವಿತೀಯ)
16 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಕೌಶಿಕ್ ಪಿ ಶೆಟ್ಟಿಗಾರ್– 80ಮೀ ಹರ್ಡಲ್ಸ್ (ಪ್ರಥಮ), ಉದ್ದ ಜಿಗಿತ (ತೃತೀಯ), ಹರ್ಷದ್ ಗೌಡ – ಉದ್ದ ಜಿಗಿತ (ದ್ವಿತೀಯ), ಆದರ್ಶ್ – 60 ಮೀ (ತೃತೀಯ), ರಾಜು – 60 ಮೀ (ಪ್ರಥಮ), 80ಮೀ ಹರ್ಡಲ್ಸ್ (ದ್ವಿತೀಯ), ಅಮೂಲ್ಯ – 80ಮೀ ಹರ್ಡಲ್ಸ್ (ತೃತೀಯ), ಮೇಘಾ – 600 ಮೀ (ಪ್ರಥಮ)
18 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ಸಮರ್ಥ್ – 1000ಮೀ (ಪ್ರಥಮ), ಜಶ್ವಿನ್ – ಎತ್ತರ ಜಿಗಿತ (ಪ್ರಥಮ), ಸಾಹಿಲ್ – 100ಮೀ (ಪ್ರಥಮ), ಹೆಚ್ ಮೈಲಾರಿ – ಚಕ್ರ ಎಸೆತ (ಪ್ರಥಮ), ಆಕಾಶ್ – 110ಮೀ ಹರ್ಡಲ್ಸ್ (ದ್ವಿತೀಯ), ಧನುಷ್ ಚಂದ್ರ – ಚಕ್ರ ಎಸೆತ (ತೃತೀಯ), ಕೃಷ್ಣ – ಜಾವೆಲಿನ್ ಎಸೆತ (ತೃತೀಯ), ನವೀನ್ – ಉದ್ದ ಜಿಗಿತ (ತೃತೀಯ), ಬಾನವಿ – 400ಮೀ (ಪ್ರಥಮ), 200 ಮೀ (ತೃತೀಯ), ನಾಗಿಣಿ – 1000 ಮೀ (ಪ್ರಥಮ), ಭಾಗೀರಥಿ – 3 ಕಿಮೀ ನಡಿಗೆ (ಪ್ರಥಮ), ಮಲ್ಲಮ್ಮ – 3 ಕಿಮೀ ನಡಿಗೆ (ತೃತೀಯ)
20 ವರ್ಷ ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ : ದಯಾನಂದ – 400ಮೀ (ಪ್ರಥಮ), ನೊಯಲ್ ಆರ್ ಪಿ – ಉದ್ದ ಜಿಗಿತ (ಪ್ರಥಮ), ರೂಪೇಶ್ – ಪೋಲೊವಾಲ್ಟ್ (ದ್ವಿತೀಯ), ಮಹಮ್ಮದ್ ಅಬ್ದುಲ್ – ಹ್ಯಾಮರ್ ಎಸೆತ (ದ್ವಿತೀಯ), ನಿತಿನ್ – ಚಕ್ರ ಎಸೆತ (ದ್ವಿತೀಯ), ರೀತುಶ್ರೀ – 400ಮೀ (ಪ್ರಥಮ), ನಿರ್ಮಲಾ – 100ಮೀ ಹರ್ಡಲ್ಸ್ (ತೃತೀಯ), 400ಮೀ ಹರ್ಡಲ್ಸ್ (ತೃತೀಯ), ಚರೀಷ್ಮಾ – 3000ಮೀ (ಪ್ರಥಮ), 5000ಮೀ (ದ್ವಿತೀಯ)
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
