ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಲಾಂಗ್‍ಟರ್ಮ್ ನೀಟ್ ಎರಡನೇ ಬ್ಯಾಚ್ ದಾಖಲಾತಿ ಆರಂಭವಸತಿ, ಊಟ, ಕೋಚಿಂಗ್ ಸಂಪೂರ್ಣ ಉಚಿತ

ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಲಾಂಗ್‍ಟರ್ಮ್ ನೀಟ್‍ನ ಎರಡನೇ ಬ್ಯಾಚ್‍ಗೆ ದಾಖಲಾತಿ ಆರಂಭಗೊಂಡಿದೆ. ಈ ತರಬೇತಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿರಲಿದೆ.

ಯಾವೊಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಯೂ ಆರ್ಥಿಕ ಸಮಸ್ಯೆಯಿಂದಾಗಿ ನೀಟ್ ತರಬೇತಿಯಿಂದ ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ (ಪಿಸಿಎಂಬಿ) ಮುಗಿಸಿ ವೈದ್ಯರಾಗಬೇಕೆಂದು ಕನಸು ಕಾಣುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಅಪೂರ್ವ ಅವಕಾಶ ಸಿಗಲಿದೆ. ಸೀಮಿತ ವಿದ್ಯಾರ್ಥಿಗಳ ವಿಶೇಷ ಎರಡನೇ ನೀಟ್ ಬ್ಯಾಚ್ ಇದಾಗಿದ್ದು ಸೇರಬಯಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ಹಾಗೂ ಊಟದ ಸೌಲಭ್ಯ ಲಭ್ಯವಿದ್ದು ಜೊತೆಗೆ ಕೋಚಿಂಗ್ ಹಾಗೂ ಅಧ್ಯಯನ ಸಾಮಾಗ್ರಿಗಳು ಸಂಪೂರ್ಣವಾಗಿ ಉಚಿತವಾಗಿರಲಿದೆ. ಆಸಕ್ತರು ಈ ಕೂಡಲೇ ದೂರವಾಣಿ ಸಂಖ್ಯೆ 7204543688/ 9611474571 ಅಥವಾ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *