ಎಸ್‍ಡಿಎಂ ಆರೋಹಮ್-2026ರಲ್ಲಿ ಆಳ್ವಾಸ್ ಪಿಯು ಕಾಲೇಜಿಗೆ ಸಮಗ್ರ ಚಾಂಪಿಯನ್‍ಶಿಪ್

ಮೂಡುಬಿದಿರೆ: ರಾಜ್ಯದ 37 ಕಾಲೇಜುಗಳಿಂದ ಆಗಮಿಸಿದ್ದ 1,350 ಸ್ಪರ್ಧಾರ್ಥಿಗಳು ಭಾಗವಹಿಸಿದ್ದ ಅಂತರ್ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಎಸ್‍ಡಿಎಂ ಆರೋಹಮ್-2026ರಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್‍ ಶಿಪ್‍ ನೊಂದಿಗೆ ನಗದು ಬಹುಮಾನವನ್ನು ಗೆದ್ದು ಸಾಧನೆ ಮೆರೆದಿದ್ದಾರೆ.


ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಪ್ರಥಮ ಹಾಗೂ ಎರಡು ದ್ವಿತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ನಿಹಾಲ್, ಶೌರ್ಯ, ವರ್ಷಾ, ನಮಿಷ್, ಶ್ರೀನಿವಾಸ್, ಸಾತ್ವಿಕ್ ಹಾಗೂ ತೇಜಶ್ರೀ ಅವರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಕಾರ್ಪೊರೇಟ್ ವಾಕ್ ಸ್ಪರ್ಧೆಯಲ್ಲಿ ಆದ್ಯಾಜೈನ್, ನಿತಿನ್‍ ಕಶ್ಯಪ್, ನಿಧಿ ಕೆ.ಕೆ. ಹಾಗೂ ನಿಯೋಲಾ ಲೋಬೊ ಅವರ ತಂಡ ಪ್ರಥಮ ಸ್ಥಾನ ಗಳಿಸಿತು.
ಈವೆಂಟ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಅರುಷ್ ಹಾಗೂ ಆದಿತ್ಯ ಅವರ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಪಕೋಡಾಟೇಲ್ಸ್ ಸ್ಪರ್ಧೆಯಲ್ಲಿ ಲಿಖಿತಾ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಪ್ರತಿಭೆ ಮೆರೆದರು.

ಇನ್ನುಟೆಕ್‍ಟ್ರೆಕ್ ಸ್ಪರ್ಧೆಯಲ್ಲಿ ಸಿದ್ದೇಶ್, ಪವನ್, ಅಮನ್ ಹಾಗೂ ಹರ್ಷ ಅವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ವೆಸ್ಟರ್ನ್‍ ಡ್ಯಾನ್ಸ್ ವಿಭಾಗದಲ್ಲಿ ಶ್ರುಜನ್ಯಾ, ತನಿಷಾ, ವೀಕ್ಷಾ, ವೈಭವಿ, ಮಾನ್ವಿ, ಮಾನಸ್ವಿ, ಅನುಷ್ಕಾ ಹಾಗೂ ನವ್ಯಾ ಅವರ ತಂಡ ದ್ವಿತೀಯ ಸ್ಥಾನ ಗಳಿಸಿತು.
ಸ್ಪರ್ಧೆಗಾಗಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ರಶ್ಮಿನ್ ತನ್ವೀರ್, ಅಕ್ಷತಾ ಜೈನ್, ಪುಷ್ಪಲತಾ ಪಿ.ಡಿ. ಹಾಗೂ ಪ್ರಫುಲ್ಲ ಶೆಟ್ಟಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್‍ ಎಮ್‍ಡಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *