ಜಪ್ಪಿನಮೊಗರು ಶ್ರೀ ಗಣೇಶೋತ್ಸವ ರಾಜ್ಯಕ್ಕೆ ಮಾದರಿ – ಯುಟಿ ಖಾದರ್ ಫರೀದ್

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ 18ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ಯ.ಟಿ ಖಾದರ್ ಫರೀದ್ ರವರು ಮಾತನಾಡುತ್ತಾ ಜಪ್ಪಿನಮೊಗರು ಗಣೇಶೋತ್ಸವದಲ್ಲಿ ಕ್ರೈಸ್ತರೊಬ್ಬರು ಹಲವು ವರ್ಷಗಳಿಂದ ಹಸಿರು ತೆನೆಯನ್ನು ಬೆಳೆದು ಸಾರ್ವಜನಿಕರಿಗೂ ನೀಡುವುದು ಹಾಗೂ ಮೂರು ದಿನಗಳ ಕಾಲ ಸಾವಿರಾರು ಭಕ್ತರಿಗೆ ನಡೆಯುವ ಅನ್ನದಾನದ ಸೇವೆಯನ್ನು ಮುಸ್ಲಿಂ ಸಮುದಾಯದ ಯೆನಪೋಯ ಸಂಸ್ಥೆಯ ಕುಲಪತಿಗಳಾದ ಯೆನಪೋಯ ಅಬ್ದುಲ್ ಕುಂಞ ಹಾಗೂ ದಿ| ಲ್ಯಾನ್ಸಿ ಡಿʼಸೋಜಾರವರ ಕುಟುಂಬಸ್ಥರು ನೀಡುತ್ತಾ ಬಂದಿರುವುದುಮತ್ತು ಶೋಭಾಯಾತ್ರೆ ಸಂದರ್ಭದಲ್ಲಿ ಜಪ್ಪಿನಮೊಗರು ಜುಮ್ಮ ಮಸೀದಿಯ ಸದಸ್ಯರು ಪಾನೀಯ ಮತ್ತು ಫಲಹಾರದ ವ್ಯವಸ್ಥೆ ಮಾಡುವುದು ಎಲ್ಲಾ ಧರ್ಮದ ಪ್ರಮುಖರನ್ನು ಅತಿಥಿಗಳಾಗಿ ಆಹ್ವಾನಿಸಿರುವುದು ಇಲ್ಲಿಯ ವೈಶಿಷ್ಟ್ಯ. ಆದುದರಿಂದ ಜಪ್ಪಿನಮೊಗರು ಗಣೇಶೋತ್ಸವವು ರಾಜ್ಯಕ್ಕೆ ಮಾದರಿಯಾಗಿದೆ ನಾವೆಲ್ಲರೂ ಒಂದೇ ಮನಸ್ಸಿನಿಂದ ಗಣೇಶ ದೇವರನ್ನು ಪೂಜಿಸಬೇಕೆಂದು ನುಡಿದರು.

ಶೈಲಜಾ ಮಹಾಬಲ ಶೆಟ್ಟಿ ತಾರ್ದೋಲ್ಯ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಗಾಟಿಸಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರು ವಹಿಸಿದ್ದು, ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ, ಅದಾನಿ ಸಂಸ್ಥೆಗಳ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೆಣವ, ಸಂಸ್ಕೃತ ಭಾರತಿ ಇದರ ಉಪಾಧ್ಯಕ್ಷರು ಹಾಗೂ ಜ್ಯೋತಿಷಿ ಅನಿಲ್ ಕುಮಾರ್ ಪಂಡಿತ್, ದಾಮೋದರ್ ಶೆಟ್ಟಿ ತಾರ್ದೋಲ್ಯ (ಉದ್ಯಮಿ) ಮಹಾಬಲ ಕೊಟ್ಟಾರಿ ಉದ್ಯಮಿಗಳು, ಶೈಲೇಶ್ ಸುವರ್ಣ, ಲಯನ್ ಹರೀಶ್ ಆಳ್ವ ಉದ್ಯಮಿ, ರತನ್ ಕುಮಾರ್ ಶೆಟ್ಟಿ ಕಾಪಿಕಾಡ್ ಗಂಗಾಧರ್ ಪದವಿನಂಗಡಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ, ಮಮತಾ ರಮೇಶ್ ಶೆಟ್ಟಿ, ಬಿಂದಿಯಾ ಯೋಗಿಶ್ ಶೆಟ್ಟಿ ಮಣ್ಣಗುಡ್ಡೆ ಸಂತೋಷ್ ಶೆಟ್ಟಿ ಕಡೇಕಾರ್ ಲ| ರವಿಕುಮಾರ್ ಎಂ.ಎಸ್. ಮೊದಲಾದ ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಸ್ಥಳೀಯರಾದ ಡಾ| ಶರ್ಮಿಳಾ ಪಿ. ನಾಯಕ್ ಹಾಗೂ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಸುಪರ್ ಟ್ಯಾಲೆಂಟಡ್ ಕಿಡ್ ಪ್ರಶಸ್ತಿ ಪಡೆದ ಒಂದುವರೆ ವರ್ಷದ ಬಾಲಿಕಿ ಚಾರ್ವಿ ಡಿ. ಶೆಟ್ಟಿ ಇವರುಗಳನ್ನು ಅಭಿನಂದಿಸಲಾಯ್ತು.
ಸಮಿತಿಯ ಅಧ್ಯಕ್ಷರಾದ ಜೆ ನಾಗೇಂದ್ರ ಕುಮಾರ್ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಜೆ. ವಂದಿಸಿದರು, ಮಲ್ಲಿಕಾ ಭಾನುಪ್ರಕಾಶ್ ಹಾಗೂ ಹರೀಶ್ ಶೆಟ್ಟಿ ತಾರ್ದೋಲ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *