ಕಾರ್ಕಳ: ಕಾರ್ಕಳ ತಾಲೂಕಿನ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ವಿಷ್ಣುಮೂರ್ತಿ ದೇವರಿಗೆ ಪೂಜೆ ಸಲ್ಲಿಸಿ, ನಾಗಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಸಲ್ಲಿಸಿದರು. ರವಿಶಾಸ್ತ್ರಿ ಅವರ ಮೂಲ ಸ್ಥಾನ ಕರ್ವಾಲು ಆಗಿದ್ದು ಕಳೆದ 17 ವರ್ಷಗಳಿಂದ ಪ್ರತಿವರ್ಷ ಕರ್ವಾಲು ಕ್ಷೇತ್ರಕ್ಕೆ ಬಂದು ದೇವರ ಅನುಗ್ರಹ ಪಡೆಯುತ್ತಿದ್ದಾರೆ.



ದೇವಸ್ಥಾನದ ಆಡಳಿತ ಮೊಕ್ತಸರ ಕೆ. ಅನಂತಪಟ್ಟಾಭಿ ರಾವ್, ಆಡಳಿತ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಸಂತೋಷ್ ಶಾಸ್ತ್ರಿ, ಕವಿತಾ ಶಾಸ್ತ್ರಿ, ದೇವಸ್ಥಾನದ ತಂತ್ರಿಗಳಾದ ನರಸಿಂಹ ತಂತ್ರಿ, ಅರ್ಚಕರಾದ ವರದರಾಜ ತಂತ್ರಿ ಬೈಲೂರು, ಅಶೋಕ್ ಕಾರಂತ, ಪವನ್ ದಾಸ್ ಹೆಗ್ಡೆ, ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ಕಮಲಾಕ್ಷ ನಾಯಕ್, ಜಾಹ್ನವಿ ಸಿ ರಾವ್, ಸತೀಶ್ ರಾವ್ ಕರ್ವಾಲು, ಸುದಾಕರ್ ಹೆಗ್ಡೆ, ಹರಿಶ್ಚಂದ್ರ ರಾವ್, ಪ್ರಶಾಂತ್ ಕುಮಾರ್ ಗುತ್ತುಮನೆ ಬೈಲೂರು, ದಿಲೀಪ್ ಶೆಟ್ಟಿ ನೀರೆ ಪ್ರಮುಖರಾದ ಮೊದಲಾದವರು ಈ ಸಂದರ್ಭದಲ್ಲಿದ್ದರು.
